ಬೊಣ್ಯಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಎರೆಹುಳ ಘಟಕ ಉದ್ಘಾಟನಾ ಕಾರ್ಯಕ್ರಮ…
ಬಂಟ್ವಾಳ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ ವಿಟ್ಲ, ಅಂಗನವಾಡಿ ಕೇಂದ್ರ ಬೊಣ್ಯಕುಕ್ಕು ಹಾಗೂ ಸ್ತ್ರೀ ಶಕ್ತಿ ಗುಂಪು ಬೊಣ್ಯಕುಕ್ಕು ಇದರ ಜಂಟಿ ಆಶ್ರಯದಲ್ಲಿ, ವೀರಕಂಬ ಗ್ರಾಮದ ಬೊಣ್ಯಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಎರೆಹುಳ ಘಟಕ ಉದ್ಘಾಟನಾ ಕಾರ್ಯಕ್ರಮ, ಪೋಷಣ್ ಮಾಸಾಚರಣೆ, ಪೌಷ್ಟಿಕ ಆಹಾರ ಶಿಬಿರ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ವೀರಕಂಭ ಗ್ರಾಮಪಂಚಾಯತ್ ಅಧ್ಯಕ್ಷರಾದ ಲಲಿತಾ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಗತಿಪರ ಕೃಷಿಕ ,ಮಾಜಿ ಸೈನಿಕರಾದ ಶ್ರೀಯುತ ರಮೇಶ್ ನೂಜಿಪ್ಪಾಡಿ ಮಂಚಿ ಎರೆಹುಳ ಗೊಬ್ಬರ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಸಾಂತ್ವನಾ ಕೇಂದ್ರ ಬಂಟ್ವಾಳ ಇಲ್ಲಿನ ಆಪ್ತ ಸಮಾಲೋಚಕರಾದ ವಿದ್ಯಾ ಸಾಂತ್ವನ ಕೇಂದ್ರದ ಬಗ್ಗೆ ಮಾಹಿತಿ ಹಂಚಿಕೊಂಡರು .
ಹಿರಿಯ ಮೇಲ್ವಿಚಾರಕಿ ರೂಪಕಲಾ ಪೋಷಣ್ ಮಾಸಾಚರಣೆ, ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವೀರಕಂಭ ಗ್ರಾಮಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಜನಾರ್ಧನ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ನಿಶಾಂತ್,ನಿಕಟಪೂರ್ವ ಅಧ್ಯಕ್ಷ ರಾದ ದಿನೇಶ್, ನಿಕಟಪೂರ್ವ ಉಪಾಧ್ಯಕ್ಷರಾದ ಶೀಲಾ ನಿರ್ಮಲಾ ವೇಗಸ್ ,ಪಂಚಾಯತ್ ಸದಸ್ಯರಾದ ಸಂದೀಪ್ ಉಪಸ್ಥಿತರಿದ್ದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಕಮರುನ್ನೀಸ,ಸಮಿತಿಯ ಸದಸ್ಯರು,ಸಂಜೀವಿನಿ ಒಕ್ಕೂಟದ ಎಂ ಬಿ ಕೆ ಮಲ್ಲಿಕಾ, ಎಲ್ ಸಿ ಆರ್ ಪಿ ಜಯಂತಿ, ಆಶಾ ಕಾರ್ಯಕರ್ತೆ ಮೋಹಿನಿ, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಅಂಗನವಾಡಿ ಸಹಾಯಕಿ ಶ್ರೀಮತಿ ಸವಿತ ಹಾಗೂ ಸಾರ್ವಜನಿಕರು ಭಾಗವಹಿಸದ್ದರು.
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.