ಕೆಟ್ಟುನಿಂತ ಸೇನಾನೌಕೆ ಸಿಬ್ಬಂದಿಯನ್ನು ರಕ್ಷಿಸಿದ ಗಸ್ತು ಹಡಗು…….
ಮಂಗಳೂರು: ಇಂಜಿನ್ ಹಾಳಾಗಿ ನಿಂತ ಭಾರತೀಯ ನೌಕಾ ಸೇನೆಯ ಹಡಗಿನಲ್ಲಿ ಸಿಲುಕಿಕೊಂಡಿದ್ದ 23 ಜನ ಸಿಬ್ಬಂದಿಯನ್ನು ನೌಕಾದಳದ ಮತ್ತೊಂದು ಹಡಗು ರಾಜಧೂತ್ ರಕ್ಷಿಸಿದೆ. ಮಂಗಳೂರು ಸಮುದ್ರದಡದಿಂದ 30 ನಾಟಿಕಲ್ ಮೈಲಿ ದೂರದಲ್ಲಿ ನೌಕಾದಳದ ಐಎಫ್‌ಬಿ ಎನ್‌ಎಸ್‌ಜಿ ಹಡಗಿನ ಇಂಜಿನ್ ಕೆಟ್ಟು ನಿಂತಿತ್ತು. ಅದರಲ್ಲಿದ್ದ 23 ಸಿಬ್ಬಂದಿಗಳು ಇದರಿಂದ ಕಂಗಾಲಾಗಿದ್ದರು. ಗೋವಾ ಮತ್ತು ಕರ್ನಾಟಕ ನಡುವೆ ಗಸ್ತು ತಿರುಗುತ್ತಿದ್ದ ರಾಜಧೂತ್ ಗಸ್ತು ಹಡಗು ಕೂಡಲೇ ಐಎಫ್‌ಬಿ ಎನ್‌ಎಸ್‌ಜಿ ಬಳಿ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮೊದಲಿಗೆ ಅಪಾಯದಲ್ಲಿ ನೌಕಾ ಸಿಬ್ಬಂದಿಯನ್ನು ರಕ್ಷಿಸಿದೆ. ಕೆಟ್ಟು ನಿಂತಿರುವ ಹಡಗಿಗೆ ತಾಂತ್ರಿಕ ನೆರವು ನೀಡಲಾದರೂ, ಇಂಜಿನ್ ರಿಪೇ ರಿಯಾಗಿಲ್ಲ ಎಂದು ತಿಳಿದುಬಂದಿದೆ.