ಕು.ವಂದನ ಮಾಲೆಂಕಿ- ತಾಳವಾದ್ಯ ಜೂನಿಯರ್ ಪರೀಕ್ಷೆಯಲ್ಲಿ 84.75% ಅಂಕ…
ಮುಳ್ಳೇರಿಯ :ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವ ವಿದ್ಯಾಲಯ ನಡೆಸಿದ ಕರ್ನಾಟಕ ತಾಳವಾದ್ಯ (ಜೂನಿಯರ್) ಪರೀಕ್ಷೆಯಲ್ಲಿ ಕು.ವಂದನ ಮಾಲೆಂಕಿ 84.75% ಅಂಕ ಪಡೆದು ತೇರ್ಗಡೆಯಾಗಿರುತ್ತಾರೆ.
ಶ್ರೀ ನಾಗರಾಜ ನೇಜಿಕ್ಕಾರು ಅವರ ಶಿಷ್ಯೆಯಾಗಿರುವ ಈಕೆ ಪುತ್ತೂರಿನ ವಿದ್ವಾನ್ ಕಾಂಚನ ಶ್ರೀ ಈಶ್ವರ ಭಟ್ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ಹಾಜರಾಗಿದ್ದಳು. ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಇತ್ತೀಚೆಗೆ ಉದಿನೂರಿನಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಮೃದಂಗ ವಾದನದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯಕ್ಷಗಾನ ಚೆಂಡೆ- ಮದ್ದಳೆ ಯಲ್ಲಿಯೂ ಪರಿಣತಿ ಪಡೆದಿರುವ ಈಕೆ ಮಾಲೆಂಕಿ ದಿ.ಶ್ರೀ ರಾಘವೇಂದ್ರ ಕಡಂಬಳಿತ್ತಾಯ ಮತ್ತು ಶ್ರೀಮತಿ ಮಾಧವಿ ದಂಪತಿಯ ಪುತ್ರಿ.