ಟೆಂಪಲ್ ಕನೆಕ್ಟ್ ಒರ್ಗನೈಸಷನ್ ಆಶ್ರಯದಲ್ಲಿ ಸಮ್ಮೇಳನ – ದ. ಕ ಜಿಲ್ಲೆಯಿಂದ ಹಲವರು ಭಾಗಿ…

ತಿರುಪತಿ: ತಿರುಪತಿಯಲ್ಲಿ ಫೆ. 17,18 ಮತ್ತು 19 ರಂದು ನಡೆದ ಅಂತರ್ರಾಷ್ಟ್ರೀಯ ಮಟ್ಟದ ಟೆಂಪಲ್ ಕನೆಕ್ಟ್ ಒರ್ಗನೈಸಷನ್ ಆಶ್ರಯದಲ್ಲಿ ನಡೆದ ಸಮ್ಮೇಳನದಲ್ಲಿ ಮೂಡಬಿದ್ರಿ ಶ್ರೀ ವೆಂಕಟರಮಣ ಮತ್ತು ಶ್ರೀ ಹನೂಮಂತ ದೇವಳದ ಪ್ರತಿನಿಧಿಯಾಗಿ ಶ್ರೀಮತಿ ಮತ್ತು ಶ್ರೀ ದೇವದಾಸ ಕಿಣಿ, ಶ್ರೀಮತಿ ಮತ್ತು ಶ್ರೀ ಎಂ. ರಾಘವೇಂದ್ರ ಭಂಡಾರ್ಕಾರ್,ಕೇಸರಗದ್ದೆ ಶ್ರೀ ರಾಮ ಮಂದಿರದ ಪ್ರತಿನಿಧಿಯಾಗಿ ಶ್ರೀಮತಿ ಮತ್ತು ಶ್ರೀ ಶ್ರೀನಿವಾಸ ಡಾOಗೆ, ಶ್ರೀಮತಿ ಮತ್ತು ಶ್ರೀಡಾ. ಸುಮಂತ ಶೆಣೈ, ಉಳ್ಳಾಲ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಮೊಕ್ತೇಶ್ವರರಾದ ಶ್ರೀಕರ ಕಿಣಿ, ಬಂಟ್ವಾಳ ಪೆರಾಜೆ ಶ್ರೀ ವಿಷ್ಣು ಮೂರ್ತಿ ದೇವಳದ ಮೊಕ್ತೇಶ್ವರರಾದ ಜಯಾನಂದ ಪೆರಾಜೆ ಮತ್ತಿತರರು ಭಾಗವಹಿಸಿದ್ದರು.
ಸರಕಾರದ ಸ್ವಾಧೀನದಲ್ಲಿರುವ ದೇವಸ್ಥಾನದ ಆಡಳಿತವನ್ನು ಮುಕ್ತಿಗೊಳಿಸಿ ಹಿಂದೂಗಳ ಕೈಗೆ ಅಧಿಕಾರ ನೀಡಬೇಕೆಂಬ ಹಕ್ಕೊತ್ತಾಯದ ಪ್ರಮುಖ ನಿರ್ಣಯವನ್ನು ಒಳಗೊಂಡಂತೆ ರಾಷ್ಟ್ರಾದ್ಯOತ ಹಿಂದೂಗಳ ಮೇಲೆ ಮತ್ತು ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ನಡೆಯುತ್ತಿರುವ ಧಾಳಿಗಳು, ಸರಕಾರದ ರಾಜಕಾರಣಿಗಳು ಮತ್ತು ಅಧಿಕಾರೀ ಪ್ರಾಯೋಜಿತ ಅಧಿಕಾರಶಾಹಿತ್ವದ ವಿರುದ್ಧ ಸಮ್ಮೇಳನದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಸಮ್ಮೇಳನದ ಉದ್ಘಾಟನಾ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಗೋವಾ ದ ಮುಖ್ಯಮಂತ್ರಿ ಪ್ರಮೋದ್ ಸಾಮಂತ್ ಉಪಸ್ಥಿತರಿದ್ದರು.17 ರಾಷ್ಟ್ರಗಳ ಮತ್ತು ರಾಷ್ಟ್ರಾದ್ಯOತ ದೇವಾಲಯಗಳ 6000ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಭಾಗಿಯಾದ ಎಲ್ಲಾ ಪ್ರತಿನಿಧಿಗಳಿಗೂ ಟಿ ಟಿ ಡಿ ವತಿಯಿಂದ ತಿರುಮಲ ವೆಂಕಟರಮಣ ದೇವರ ದರ್ಶನವನ್ನು ಈ ಸಂದರ್ಭದಲ್ಲಿ ಉಚಿತವಾಗಿ ಹಮ್ಮಿಕೊಂಡದ್ದು ವಿಶೇಷವಾಗಿತ್ತು. ಆರ್ಗಾನೈಶೇಷನ್ ನ ಕೋರ್ ಕಮಿಟಿಯ ಸದಸ್ಯರೂ,ಕೆ.ಎಂ.ಸಿ ಮಣಿಪಾಲದ ಡಾ. ಉಷಾ ಪೈಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.