ಅಮೃತ ಸೋಮೇಶ್ವರ ಶ್ರದ್ಧಾಂಜಲಿ ಸಭೆ…
ಅಮೃತ ಸೋಮೇಶ್ವರರು ಬಹುಭಾಷಾ ಪಂಡಿತರು ಪ್ರೊ. ವಿ ಬಿ ಆರ್ತಿಕಜೆ...
ಪುತ್ತೂರು: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿಗಳಾದ ಡಾ.ಅಮೃತ ಸೋಮೇಶ್ವರ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಪುತ್ತೂರಿನ ಅನುರಾಗ ವಠಾರದಲ್ಲಿ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮವು ನಡೆಯಿತು.
ಅಮೃತ ಸೋಮೇಶ್ವರ ಅವರು ಬಹುಭಾಷಾ ಪಂಡಿತರು, ಅವರು ಮಲಯಾಳಂ, ಕನ್ನಡ ತುಳು ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ, ಯಕ್ಷಗಾನ, ನಾಟಕ ರಂಗಗಳಲ್ಲಿ ಇವರ ಕೊಡುಗೆ ಅಪಾರ, ಎಳ್ಳಷ್ಟು ಕೋಪವಿಲ್ಲದ,ಸಾಧು ಧರ್ಮವನ್ನು ಅಳವಡಿಸಿಕೊಂಡ ಮಹಾನ್ ಚೇತನ ಅಮೃತ ಸೋಮೇಶ್ವರ ಅವರು ಎಂದು ಹಿರಿಯ ಸಾಹಿತಿಗಳಾದ ಪ್ರೊ. ವಿ ಬಿ ಅರ್ತಿಕಜೆ ಅವರು ಅಮೃತ ಸೋಮೇಶ್ವರ ಅವರ ಜೊತೆಗಿನ ಒಡನಾಟವನ್ನು ಸ್ಮರಿಸುತ್ತಾ ಶ್ರದ್ಧಾಂಜಲಿ ಅರ್ಪಿಸಿದರು.
ಹಿರಿಯ ಸಾಹಿತಿಗಳಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಜಯಾನಂದ ಪೆರಾಜೆ, ನಲ್ಕ ಗೋಪಾಲಕೃಷ್ಣ ಆಚಾರ್, ಭಾಸ್ಕರ್ ಬಾರ್ಯ, ಹರಿನಾರಾಯಣ ಮಾಡವು, ಡಾ.ಹೆಚ್ ಜಿ ಶ್ರೀಧರ್, ಅಬೂಬಕ್ಕರ್ ಆರ್ಲಪದವು, ಪುತ್ತೂರು ಉಮೇಶ್ ನಾಯಕ್ ಮುಂತಾದವರು ಅಮೃತ ಸೋಮೇಶ್ವರ ಅವರ ಜೊತೆಗಿನ ಒಡನಾಟದ ಅಮೃತಗಳಿಗೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರು . ಶ್ರೀ ಸುಬ್ರಹ್ಮಣ್ಯ ಶರ್ಮಾ ಅವರು ಜಿ.ಎಸ್ ಶಿವರುದ್ರಪ್ಪ ಅವರು ರಚಿಸಿದ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಬಿ.ಪುರಂದರ ಭಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಶ್ರೀ ಲಕ್ಷ್ಮೀಶ ತೋಳ್ಪಾಡಿ, ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ, ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶ್ಯಾಧ್ಯಕ್ಷರಾದ ಬಿ ಐತಪ್ಪ ನಾಯ್ಕ್ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಪದಾಧಿಕಾರಿಗಳು ಹಾಗೂ ಅಮೃತ ಸೋಮೇಶ್ವರ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತ್ರತ್ವದಲ್ಲಿ ಹಿರಿಯ ಸಾಹಿತಿಗಳಾದ ಡಾ.ಅಮೃತ ಸೋಮೇಶ್ವರ ಅವರಿಗೆ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ವಿ ಬಿ ಅರ್ತಿಕಜೆ, ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಜಯಾನಂದ ಪೆರಾಜೆ, ನಲ್ಕ ಗೋಪಾಲಕೃಷ್ಣ ಆಚಾರ್, ಭಾಸ್ಕರ್ ಬಾರ್ಯ, ಹರಿನಾರಾಯಣ ಮಾಡವು, ಡಾ.ಹೆಚ್ ಜಿ ಶ್ರೀಧರ್, ಅಬೂಬಕ್ಕರ್ ಆರ್ಲಪದವು,ಅವರು ಅಮೃತ ಸೋಮೇಶ್ವರ ಅವರ ಜೊತೆಗಿನ ಒಡನಾಟದ ಅಮೃತಗಳಿಗೆಯನ್ನು ಈ ರೀತಿ ಸ್ಮರಿಸಿ ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಿದರು . ಶ್ರೀ ಸುಬ್ರಹ್ಮಣ್ಯ ಶರ್ಮಾ ಅವರು ಜಿ.ಎಸ್ ಶಿವರುದ್ರಪ್ಪ ಅವರು ರಚಿಸಿದ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.