ಕಶೆಕೋಡಿಯಲ್ಲಿ ಸ್ವಚ್ಚತಾ ಅಭಿಯಾನ ಆರಂಭ…
ಬಂಟ್ವಾಳ: ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಶುಭದಿನದಂದು ದೇವಾಲಯಗಳ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಎಲ್ಲಾ ದೇವಾಲಯಗಳು,ಮಂದಿರಗಳು ಸ್ವಚ್ಚವಾಗಿರಿಸಲು ಪ್ರಧಾನಮಂತ್ರಿಯವರ ಕರೆಯಂತೆ ಸಂಕಲ್ಪ ಮಾಡಲಾಗಿದ್ದು ಸ್ವಯಂ ಸೇವಕರು ಪಾಲ್ಗೊಳ್ಳುತ್ತಿದ್ದಾರೆ.
ಆರಂಭದಲ್ಲಿ ಶ್ರೀ ರಾಮ ಜಯರಾಮ ಜಯಜಯರಾಮ ಎಂಬ ರಾಮತಾರಕ ಮಂತ್ರಗಳನ್ನು ಹೇಳಿ ಪ್ರಾರ್ಥನೆ ಸಲ್ಲಿಸಲಾಯಿತು.ಬಳಿಕ ದೇವಾಲಯದ ಪರಿಸರದಲ್ಲಿ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯ ಮಾಡಲಾಯಿತು.
ದೇವಾಲಯದ ಆಡಳಿತ ಮೊಕ್ತೇಸರ ಗೋಪಾಲ ಶೆಣೈ, ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ. ಯಸ್ . ಮಂಡಲ ಕಾರ್ಯದರ್ಶಿ ಮಮತಾ,ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಓಬಿಸಿ ಮೋರ್ಚಾದ ಕಿಶೋರ್ ದಾಸಕೋಡಿ, ಪಂಚಾಯತ್ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಹಿರಣ್ಮಯಿ,ಮಾಜಿ ಸದಸ್ಯ ವೆಂಕಟ್ರಾಯ ಪ್ರಭು, ರಾಘವೇಂದ್ರ ಪ್ರಭು, ಬಾಲಕೃಷ್ಣ ಪೂಜಾರಿ, ಹರೀಶ ಶೆಣೈ ವಿಶ್ವನಾಥ ಗೌಡ, ಮಲ್ಲಿಕಾ ಮತ್ತಿತರರು ಪಾಲ್ಗೊಂಡಿದ್ದರು.