ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನ್ಯಾ ನೆಹ್ವಾಲ್ ಬಿಜೆಪಿಗೆ…

ನವದೆಹಲಿ: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನ್ಯಾ ನೆಹ್ವಾಲ್ ಅವರು ಇಂದು ಬಿಜೆಪಿ ಸೇರಿದ್ದಾರೆ.
ಹರಿಯಾಣದ ಹಿಸಾರ್ ಮೂಲದವರಾದ ಸೈನಾ ನೆಹ್ವಾಲ್ ಇಂದು ಬಿಜೆಪಿ ಸೇರ್ಪಡೆಗೊಂಡಿದ್ದು, ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ತಾರಾ ಪ್ರಚಾರಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
ದೆಹಲಿ ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿಯೇ 29 ವರ್ಷದ ಸೈನಾ ಬಿಜೆಪಿಗೆ ಸೇರಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ 11 ಸೂಪರ್ ಸೀರೀಸ್ ಸೇರಿದಂತೆ 24 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಸೈನಾ, 2015ರಲ್ಲಿ ಜಗತ್ತಿನ ನಂಬರ್ ಒನ್ ಶ್ರೇಯಾಂಕದ ಆಟಗಾರ್ತಿಯೆಮಬ ಕೀರ್ತಿಗೆ ಭಾಜನರಾಗಿದ್ದರು. ಪ್ರಕಾಶ್ ಪಡುಕೋಣೆ ಬಳಿಕ ಈ ಗೌರವ ಪಡೆದ ಭಾರತದ ಎರಡನೆಯ ಕ್ರೀಡಾಪಟು ಎನಿಸಿದ್ದರು.