ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ…

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆಯು ವಿಫುಲ ಅವಕಾಶಗಳ ಆಗರವಾಗಿದೆ, ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ತನ್ನನ್ನು ತಾನು ಎತ್ತರಿಸಿಕೊಳ್ಳುವ ಜತೆಯಲ್ಲಿ ರಾಷ್ಟ್ರ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬಹುದು ಎಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಕೆ.ಚಂದ್ರಶೇಖರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಯೂತ್ ರೆಡ್ ಕ್ರಾಸ್ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಪ್ರಯುಕ್ತ ಸಾವರ್ಕರ್ ಸಭಾಭವನದಲ್ಲಿ ಸೆ.24 ರಂದು ನಡೆದ ಸಮಾರಂಭದಲ್ಲಿ ಯುವಜನತೆ ಮತ್ತು ಸಾಮಾಜಿಕ ಸೇವೆ ಎನ್ನುವ ವಿಷಯದ ಬಗ್ಗೆ ಮಾತನಾಡಿದರು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಕುಸಿತಗಳಾದರೆ ರಾಷ್ಟ್ರದ ಬಲವೇ ಕಡಿಮೆಯಾದಂತೆ ಆದುದರಿಂದ ಮಕ್ಕಳಿಗಾಗಲೀ ವಿದ್ಯಾರ್ಥಿಗಳಿಗಾಗಲೀ ಸರಿಯಾದ ನೈತಿಕ ಶಿಕ್ಷಣವನ್ನು ನೀಡಬೇಕು ಎಂದರು. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಪೂರ್ವ ತಯಾರಿ ಅಗತ್ಯ. ಅದರ ಒಳಿತು ಕೆಡುಕುಗಳನ್ನು ತಿಳಿದುಕೊಂಡರೆ ಯಶಸ್ಸು ಗಳಿಸುವುದು ಸಾಧ್ಯ ಎಂದರು. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಸಮಸ್ಯೆಗಳು ಉದ್ಭವಿಸಿದಾಗ ಶಾಂತಚಿತ್ತರಾಗಿ ಯೋಚಿಸಿ ಪರಿಹರಿಕೊಳ್ಳಬೇಕು ಬದಲಾಗಿ ನಕಾರಾತ್ಮಕ ಭಾವನೆಗಳಿಂದ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ನುಡಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕ ಡಾ.ರಾಜೇಶ್.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ರಾಜೇಶ್.ಆರ್ ಸ್ವಾಗತಿಸಿದರು. ಶ್ರದ್ಧಾ.ಕೆ.ಎಸ್ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.

nss day celebrations (2)

Related Articles

Back to top button