ಕರ್ನಾಟಕ ಬ್ಯಾಂಕ್ ಶತಮಾನೋತ್ಸವ – “ಸಹ ಯಾನದ ಮಾನ” ಶತಮಾನ ಗೀತೆ ಲೋಕಾರ್ಪಣೆ…

ಮಂಗಳೂರು: ಕರ್ನಾಟಕ ಬ್ಯಾಂಕ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೆ. ವಿ. ರಮಣ್ ಮಂಗಳೂರು ಪರಿಕಲ್ಪನೆ – ಸಾಹಿತ್ಯ ದ ” ಸಹ ಯಾನದ ಮಾನ ” – ಶತಮಾನ ಗೀತೆಯನ್ನು ನೃತ್ಯ ಪ್ರದರ್ಶನದ ಮೂಲಕ ಲೋಕಾರ್ಪಣೆ ಮಾಡಲಾಯಿತು.
ವ್ಯಾಪಕ ಮೆಚ್ಚುಗೆ ಗಳಿಸಿದ ಈ ಸಾಹಿತ್ಯ- ಸಂಗೀತ ಸಂಭ್ರಮವು ನೃತ್ಯ ದೊಂದಿಗೆ ಮುಪ್ಪುರಿಗೊಂಡಿತು. ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದ ಮಣಿ ಶೇಖರ್ ಶಿಷ್ಯರು ವಿದುಷಿ ಶ್ರೀಲತಾ ನಾಗರಾಜ್ ಸಂಯೋಜನೆಯಲ್ಲಿ ನರ್ತಿಸಿದರು. ಚಂದ್ರಶೇಖರ್. ಕೆ. ಶೆಟ್ಟಿ ಸಹಕರಿಸಿದರು.

