ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಪಹಲ್ಗಾಮ್ ಘಟನೆ ಬಗ್ಗೆ ಸಂತಾಪ ಹಾಗೂ ಖಂಡನೆ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಕಚೇರಿ ವತಿಯಿಂದ ಕಾಶ್ಮೀರದಲ್ಲಿ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಬೇರೆ ಬೇರೆ ರಾಜ್ಯದ ಪ್ರವಾಸಿಗರ ಮೇಲಿನ ದಾಳಿ ಖಂಡಿಸಿ ಸಂತಾಪ ಸಭೆ ನಡೆಯಿತು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹಿದ್ ತೆಕ್ಕಿಲ್ ‘ಉಗ್ರಗಾಮಿಗಳಿಗೆ ಯಾವುದೇ ಜಾತಿ ಧರ್ಮ ಇಲ್ಲ. ನಾವೆಲ್ಲರೂ ಒಟ್ಟಾಗಿ ಉಗ್ರಗಾಮಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ. ಜಾತಿ ಧರ್ಮ,ಪಕ್ಷ ಮೀರಿ ಸರಕಾರವನ್ನು ಬೆಂಬಲಿಸೋಣ ಎಂದರು.
ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ, ಸೊಸೈಟಿ ಉಪಾಧ್ಯಕ್ಷರಾದ ಯಮುನಾ ,ಲಯನ್ ಪ್ರಶಾಂತ್ ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಜಿ. ಕೆ ಹಮೀದ್ ಗೂನಡ್ಕ, ಸುಂದರಿ, ಜಗದೀಶ್ ರೈ, ಸದಸ್ಯರುಗಳಾದ ಶ್ರೀಮತಿ ವಿಮಲಾ ಪ್ರಸಾದ್, ರಜನಿ ಶರತ್ ಮನೋಜ್ ಬೈಲೆ, ವರ್ತಕರ ಸಂಘದ ಕಾರ್ಯದರ್ಶಿ ರಝಾಕ್ ಸೂಪರ್ ಸ್ವ ಸಹಾಯ ಸಂಘಗಳ ಒಕ್ಕೂಟದ ಶಿಲ್ಪಾ ಸನತ್ ,ಕಾಂತಿ ಬಿ.ಎಸ್, ಲಲನ,ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಜಯಂತಿ, ಸ್ವಸಹಾಯ ಸಂಘದ ಭಾರತಿ, ನಿವೃತ್ತ ಸೈನಿಕ ಸಚಿನ್, ಉದಯ ಪೂಜಾ ಫೈನಾನ್ಸ್ ಕಂಟ್ರಾಕ್ಟರ್, ಅಶ್ರಫ್ ,ವಿಶ್ವನಾಥ್ ಗೌಡಾ ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ,ಪುಷ್ಪ ಸಂಪಾಜೆ,ಸುಜೀತ್,ನವಮಿ ಹಾಗೂ ಪಂಚಾಯತ್ ಸಿಬ್ಬಂದಿ ಗೋಪಮ್ಮಾ ಭರತ್,ಮಧುರ, ಉಮೇಶ್ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಶ್ರೀಮತಿ ಸುಮತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಕಾರ್ಯಕ್ರಮ ನಿರೂಪಿಸಿ,ಸದಸ್ಯರಾದ ಸವಾದ್ ಗೂನಡ್ಕ ವಂದಿಸಿದರು.