ಡಾ. ರಾಜೇಂದ್ರಕುಮಾರ್ ರವರಿಗೆ ಸುಳ್ಯ ಅಲ್ಪಸಂಖ್ಯಾತರ ಸಹಕಾರ ಸಂಘದ ವತಿಯಿಂದ ಸನ್ಮಾನ…
ಎಲ್ಲರನ್ನು ಜತೆಯಾಗಿ ಕೊಂಡು ಹೋಗುವ ಧ್ಯೇಯವೇ ಸಹಕಾರಿ ತತ್ವ : ಡಾ. ರಾಜೇಂದ್ರ ಕುಮಾರ್...

ಮಂಗಳೂರು:ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ರಾಜೇಂದ್ರಕುಮಾರ್ ರವರಿಗೆ ಸುಳ್ಯ ಅಲ್ಪಸಂಖ್ಯಾತರ ಸಹಕಾರ ಸಂಘದ ವತಿಯಿಂದ ಸನ್ಮಾನ ಇತ್ತೀಚೆಗೆ ನಡೆಯಿತು.
ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೊದ್ದೇಶ ಸಹಕಾರ ಸಂಘ. ನಿ. ಇದರ ವತಿಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ, ರಾಜ್ಯ ಅಪೆಕ್ಸ್ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಲ ಇದರ ಮಾಜಿ ಅಧ್ಯಕ್ಷರಾಗಿ ಜಿಲ್ಲೆಯ ವಿವಿಧ ಕ್ಷೇತ್ರ ಗಳಾದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಸಬಲೀಕರಣ ಕ್ಷೇತ್ರದಲ್ಲಿ ಕಳೆದ 4 ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಡಾ. ರಾಜೇಂದ್ರಕುಮಾರ್ ರವರು ಇತ್ತೀಚೆಗೆ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯ ಎಸ್ ಸಿ ಆರ್ ರಾಷ್ಟ್ರೀಯ ಅಧ್ಯಕ್ಷ ರಾಗಿ ನೇಮಕಗೊಂಡು, ಪ್ರತಿಷ್ಠಿತ ಮಂಗಳೂರು ವಿಶ್ವ ವಿದ್ಯಾ ನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ವನ್ನು ಪಡೆದು ಅವಳಿ ಡಾಕ್ಟರೇಟ್ ಪದವಿ ಪಡೆದ ವಿಶಿಷ್ಟ ಹೆಗ್ಗಳಿಕೆಗೆ ಪಾತ್ರರಾದ ಹಿನ್ನಲೆಯಲ್ಲಿ ಸುಳ್ಯ ಅಲ್ಪಸಂಖ್ಯಾತರ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಗಿದೆ ಎಂದು ಸಂಘ ದ ಅಧ್ಯಕ್ಷ ಐ. ಕೆ. ಮಹಮ್ಮದ್ ಇಕ್ಬಾಲ್ ಎಲಿಮಲೆ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ರಾಜೇಂದ್ರಕುಮಾರ್ ರವರು ಸಹಕಾರ ಕ್ಷೇತ್ರ ದ ಮೂಲಕ ಜಾತಿ, ಮತ, ಪಕ್ಷ ಭೇದ ವಿಲ್ಲದೆ ಎಲ್ಲರೂ ಆರ್ಥಿಕ ಸಬಲೀಕರಣ ಹೊಂದಲು ಸಾಧ್ಯ. ನವೋದಯ ಟ್ರಸ್ಟ್ ಮೂಲಕ ಮಹಿಳಾ ಸಬಲೀಕರಣದ ಮೂಲಕ ಜಿಲ್ಲೆಯ ಅಭಿವೃದ್ಧಿಯಲ್ಲಿ ಡಿಸಿಸಿ ಬ್ಯಾಂಕ್ ಕೈ ಜೋಡಿಸಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯಟ್ಟು, ಸಂಘ ದ ಉಪಾಧ್ಯಕ್ಷ ಕೆ. ಎಂ. ಮುಹಿಯದ್ದೀನ್ ಫ್ಯಾನ್ಸಿ, ಸುಳ್ಯ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ, ಸಂಘ ದ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಕೆಪೆಕ್ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್, ಉದ್ಯಮಿ ಕೆ. ಬಿ. ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.