ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಪಾದಯಾತ್ರೆ…
ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಎ. 03 ರಂದು ಮುಂಜಾನೆ 6 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಂಟ್ವಾಳ ತಾಲೂಕಿನ ಮೂರು ಕಡೆಗಳಿಂದ ಪಾದಯಾತ್ರೆ ನಡೆಸಲಾಯಿತು.
ಮಹಿಳೆಯರು ಮಕ್ಕಳು , ಯುವಕರು ಸೇರಿದಂತೆ ತಾಲೂಕಿನ ಸಾವಿರಾರು ಮಂದಿ ಈ ಪಾದಯಾತ್ರೆ ಯಲ್ಲಿ ಪಾಲ್ಗೊಂಡರು.
ವಿಹಿಂಪದ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ಈ ಸಂದರ್ಭದಲ್ಲಿ ಮಾತನಾಡಿ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಲೋಕಕಲ್ಯಾರ್ಥವಾಗಿ ಪಾದಯಾತ್ರೆ ನಡೆದಿದ್ದು, ಹಿಂದೂ ಸಮಾಜದ ಸಂಸ್ಕಾರ , ಸಂಸ್ಕ್ರತಿಯನ್ನು ತಲೆತಲಾಂತರದವರೆಗೂ ಉಳಿಸುವ ಜವಬ್ದಾರಿ ಯುವ ಸಮುದಾಯದ ಮೇಲೆ ಇದೆ. ಯಾವುದೇ ಪಾಶ್ಚಾತ್ಯ ದೇಶಗಳ ಪ್ರಭಾವಕ್ಕೆ ಒಳಗಾಗಿ ನಾವು ನಮ್ಮತನವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು, ದೇವಾಲಯಗಳಲ್ಲಿ ಏಕಾಗ್ರತೆಯ ನಿಟ್ಟಿನಲ್ಲಿ ಪರಿಶುಧ್ದವಾದ ಮನಸ್ಸಿನ ಜೊತೆಯಲ್ಲಿ ಶುಭ್ರವಾದ ವಸ್ತ್ರಗಳ ತೊಡುಗೆಯಾಗಬೇಕು ಎಂದು ಅವರು ಹೇಳಿದರು.
ಹಿರಿಯರ ತ್ಯಾಗ, ಬಲಿದಾನಗಳು ದೇಶದ ಭದ್ರತೆಯ ದೃಷ್ಟಿಯಿಂದ ಆಗಿರುವುದನ್ನು ನಾವು ಮೈಮರೆಯದೆ ದೇಶದ ಭಾವನಾತ್ಮಕ ವಿಚಾರಗಳಿಗೆ ನಾವು ಒಂದಾಗಬೇಕು ಎಂದು ಅವರು ಹೇಳಿದರು.
ಪ್ರಮುಖ ಬೇಡಿಕೆಗಳು:
1.ದೇವಸ್ಥಾನದಲ್ಲಿ ವಸ್ತ್ರಸಂಹಿತೆಯನ್ನು ಕಟ್ಟು ನಿಟ್ಜಾಗಿ ಜಾರಿಗೊಳಿಸಬೇಕು.
2. ದೇವಸ್ಥಾನದ ವತಿಯಿಂದ ಒಂದು ಗೋಶಾಲೆಯ ನಿರ್ಮಾಣ ಹಾಗೂ ನಿರ್ವಹಣೆ
3. ದೇವಸ್ಥಾನದ ಜಾತ್ರ ಮಹೋತ್ಸವ/ಉತ್ಸವಾದಿಗಳ ಸಂಧರ್ಭಗಳಲ್ಲಿ ದೇವಸ್ಥಾನದ ಪರಿಸರದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಕೇಂದ್ರಗಳನ್ನು ತೆರೆಯಲು ಅವಕಾಶ
4. ದೇವಸ್ಥಾನದ ವತಿಯಿಂದ ಹಿಂದೂ ಧಾರ್ಮಿಕ ಶಿಕ್ಷಣ ನೀಡುವ ಉದ್ದೇಶದಿಂದ ಬಾಲ ಸಂಸ್ಕಾರ ಕೇಂದ್ರಗಳನ್ನು ತೆರೆಯುವುದು.
ಈ ರೀತಿಯ ಪ್ರಮುಖ ಬೇಡಿಕೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ/ವ್ಯವಸ್ಥಾಪನ ಸಮಿತಿ ಮೂಲಕ ಜಾರಿ ತರುವಂತೆ ಆಗ್ರಹಿಸುತ್ತಾ ಲೋಕ ಕಲ್ಯಾಣಾರ್ಥವಾಗಿ 03.ರಂದು ಆದಿತ್ಯವಾರ ಬೆಳಗ್ಗೆ 6 ಸರಿಯಾಗಿ ತಾಲೂಕಿನ ಪ್ರಮುಖ ದೇವಸ್ಥಾನವಾದ ಶ್ರೀ ಕ್ಷೇತ್ರ ಪೊಳಲಿಗೆ 3 ಕಡೆಗಳಿಂದ ಏಕ ಕಾಲದಲ್ಲಿ ಪಾದಯಾತ್ರೆ ನಡೆಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಿಗೆ ಈ ಪ್ರಮುಖ ಬೇಡಿಗಳ ಬಗ್ಗೆ ಮನವಿ ನೀಡಲಾಯಿತು.
ಬಿ. ಸಿ. ರೋಡ್ ಕೈಕಂಬ ಪೊಳಲಿ ದ್ವಾರ, ಕಡೆಗೋಳಿಯ ಪೊಳಲಿ ದ್ವಾರ ಹಾಗೂ ಗುರುಪುರ ಕೈಕಂಬ ಪೊಳಲಿ ದ್ವಾರಗಳ ಬಳಿ 7000 ಕ್ಕೂ ಹೆಚ್ಚು ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದರು.
ಭಜರಂಗದಳದ ಜಿಲ್ಲಾ ಸಂಚಾಲಕ ಭರತ್ ಕುಮ್ಡೆಲು, ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ತಾಲೂಕು ಸಂಚಾಲಕ ಶಿವಪ್ರಸಾದ್ ತುಂಬೆ, ಸಂಘಟನೆಯ ಪ್ರಮುಖರಾದ ಸುರೇಶ್ ಬೆಂಜನಪದವು, ದೀಪಕ್ ಅಜೆಕಲ, ಸಂತೋಷ್ ಕುಲಾಲ್ ಸರಪಾಡಿ, ಪ್ರವೀಣ್ ಕುಲಾಲ್ ಕುಂಟಲ್ ಲ್ಕೆ, ಪ್ರತೀಕ್ ಎರ್ಮಾಳ, ಲೋಹಿತ್ ಪೊಡಿಕಲ, ಕಿರಣ್ ಕಾಪಿಕಾಡ್, ವಿನಿತ್ ತುಂಬೆ, ಪ್ರಸಾದ್ ಬೆಂಜನಪದವು , ದುರ್ಗಾವಾಹಿನಿ ಸಂಚಾಲಕಿ ಸೌಮ್ಯ ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು.