ಸಂಪಾಜೆ ಭೂಕಂಪ – ರಾಜ್ಯ ವಿಪತ್ತು ನಿರ್ವಹಣಾ ತಂಡದ ಭೇಟಿ…

ಸುಳ್ಯ: ಸಂಪಾಜೆ ಭೂಕಂಪ ಪೀಡಿತ ಪ್ರದೇಶಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡದ ಜಿಯೋಲೋಜಿಕಲ್ ಸರ್ವೆ ಆಫ್ ಇಂಡಿಯಾದ ರಾಹುಲ್, ಡಾ. ಶ್ರೀ ನಿವಾಸ್ ರೆಡ್ಡಿ, ಜಗದೀಶ್, ನಾಗೇಶ್ ಪಿ. ಆರ್, ಅಬೂಸಾಲಿ ಪಿ. ಕೆ., ಸರೋಜ ರವರ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ, ಸದಸ್ಯರು ಗಳಾದ ಎಸ್. ಕೆ. ಹನೀಫ್, ಅಬೂಸಾಲಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ, ತಾಲೂಕು ಕಚೇರಿಯ ನಾರಾಯಣ, ಸೋಮನಾಥ್ ಉಪಸ್ಥಿತರಿದ್ದರು.