ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಇನ್ ಫಾರ್ಮೇಶನ್ ಸೈನ್ಸ್ ವಿಭಾಗದ ವತಿಯಿಂದ ತಾಂತ್ರಿಕ ಉಪನ್ಯಾಸ…

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಇನ್ ಫಾರ್ಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ” ಚಾಟ್ ಬಾಟ್ಸ್ ” ಎಂಬ ವಿಷಯದ ಕುರಿತಾದ ತಾಂತ್ರಿಕ ಉಪನ್ಯಾಸ ಜೂ.17 ರಂದು ಆಯೋಜಿಸಲಾಗಿತ್ತು.
ಇನ್ ಫಾರ್ಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ, ISTE ಸ್ಟೂಡೆಂಟ್ ಚಾಪ್ಟರ್ (KA -109) ಹಾಗೂ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಮೈಂಡ್ ಸ್ಟ್ಯಾಕ್ ಟೆಕ್ನಾಲಜೀಸ್ ಇದರ ಸಹ-ಸ್ಥಾಪಕ ಮತ್ತು ನಿರ್ದೇಶಕ ಶಾಝದ್ ಮವೇದ್ ಪಾಲ್ಗೊಂಡಿದ್ದರು.
ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಮುಖ್ಯಸ್ಥೆ ಪ್ರೊ. ರಶ್ಮಿ ಪಿ ಸಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಪ್ರೊ. ದೀಕ್ಷಾ ಕೆ ಆರ್ ಕಾರ್ಯಕ್ರಮ ಸಂಯೋಜಿಸಿದ್ದರು.
ವಿದ್ಯಾರ್ಥಿಗಳಾದ ಆಯೇಷಾ ರಮೀಲ ಸ್ವಾಗತಿಸಿ, ಫಾತಿಮಾತುಲ್ ಮುಹಸಿನಾ ಅತಿಥಿಗಳ ಪರಿಚಯ ಮಾಡಿದರು. ಸಂಕೇತ್ ವಂದಿಸಿದರು.
ವಿಭಾಗದ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

IMG 20220617 WA0024 200x300

IMG 20220617 WA0028 300x200

IMG 20220617 WA0027 300x222

IMG 20220617 WA0025 300x211

Related Articles