ಸುಳ್ಯ ಗಾಂಧಿನಗರ ನವೀಕೃತ ಜುಮಾ ಮಸ್ಜಿದ್ ಉದ್ಭಾಟನೆ…
ಸುಳ್ಯ: ಸುಳ್ಯ ಗಾಂಧಿನಗರ ನವೀಕೃತ ಜುಮಾ ಮಸ್ಜಿದ್ ಉದ್ಭಾಟನೆ ಎ.11ರಂದು ನಡೆಯಿತು.
ಅಖಿಲ ಭಾರತ ಜಂಇಯ್ಯತುಲ್ ಉಲಮಾ ಹಾಗೂ ಮರ್ಕಸ್ ಕ್ಯಾಲಿಕಟ್ ಇದರ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕ್ಕರ್
ಮುಸ್ಲಿಯಾರ್ ಕಾಂತಪುರಂ ಉದ್ಭಾಟನೆ ನೆರವೇರಿಸಿದರು. ಖಾಧಿು ಫರುಲ್ ಕೋಯಮ್ಮ ತಂಜಳ್ ಅಲ್ ಬುಖಾರಿ ಕೂರತ್ ವಕ್ಫ್ ಕರ್ಮ ನಿರ್ವಹಿಸಿದರು.
ಸಮಾರಂಭದ ಪೂರ್ವಭಾವಿಯಾಗಿ ನಡೆದ ಬದರ್ ಮೌಲೂದ್ ಕಾರ್ಯಕ್ರಮಕ್ಕೆ ಸಮಸ್ತ ಜಂಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸಮಿತಿ ಸದಸ್ಯರಾದ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ನೇತೃತ್ವ ವಹಿಸಿದ್ದರು.
ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಆದಂಕುಂಇ ಕಮ್ಮಾಡಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ,ಮರ್ಕಜ್ ಕೊಆರ್ಡಿನೇಟರ್ ತನ್ವೀರ್, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡು,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್,ಜಮಾಯತ್ ಕಮಿಟಿ ಮಾಜಿ ಅಧ್ಯಕ್ಷ ಕೆ.ಬಿ ಮಹಮ್ಮದ್ ಹಾಜಿ,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ಹಾಜಿ ಅಬ್ದುಲ್ ಖಾದರ್ ಕಲ್ಲಪಳ್ಳಿ,ಸಯ್ಯದ್ ಹುಸೈನ್ ತಂಜಳ್ ಅದೂರ್,ಸಯ್ಯದ್ ಅಲವಿ ತಂಜಳ್,ಮೊಗರ್ಪಣೆ ಜುಮ್ಮಾ ಮಸೀದಿ ಖತೀಬರಾದ ಹಾಪೀಳ್ ಶೌಕತ್ ಆಲಿ ಸಖಾಫಿ,ಮೂಡುಬಿದಿರೆ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಯಾಕುಬ್ ದಾರಿಮಿ,ಬೆಳ್ಳಾರೆ ರುಕರಿಯ ಜುಮ್ಮಾ ಮಸೀದಿ ಖತೀಬರಾದ ಯೂನುಸ್ ಸಖಾಫಿ ವಯನಾಡ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ, ಜಮಾಯತ್ ಕಮಿಟಿ ಪ್ರ.ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್,ಇಬ್ರಾಹಿಂ ಸಖಾಫಿ ವಯನಾಡ್ ಉಪಸ್ಥಿತರಿದ್ದರು.
ಅನ್ಸಾರಿಯ ಎಜುಕೇಶನ್ ಸೆಂಟರ್ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು.ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಕೆ.ಎಂ ಮುಸ್ತಫಾ ಸ್ವಾಗತಿಸಿದರು. ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು.ಗಾಂಧಿನಗರ ಜುಮ್ಮಾ ಮಸೀದಿ ಸಹಾಯಕ ಖತೀಬರಾದ ಶೌಕತ್ ಆಲಿ ಅಮಾನಿ ,ಕೆ.ಬಿ ಮಜೀದ್ ಕಾರ್ಯಕ್ರಮ ನಿರೂಪಿಸಿದರು.
ವಿಶೇಷತೆಗಳು:
* ಪರಿಸರದ ಮನೆಗಳಿಂದ ಗೃಹಿಣಿಯರು ವಿವಿಧ ಖಾದ್ಯಗಳನ್ನು ಮನೆಯಲ್ಲೇ ತಯಾರಿಸಿ ಕಳುಹಿಸಿದ್ದರು.
* ಪರಿಸರದ ಯುವಕರು ಬಿಳಿ ಕುರ್ತಾ ಧರಿಸಿ ಕಂಗೊಳಿಸುತಿದ್ದರು.
* ಮಸೀದಿಯ ಒಳಾಂಗಣ ಅಲಂಕಾರಕ್ಕೆ ಟೀಕ್ ಮರವನ್ನು ಬಳಸಲಾಗಿತ್ತು.
* ಪರಿಸರ ರಸ್ತೆಗಳನ್ನು ಮಿನೀಯೇಚರ್ ದೀಪಗಳಿಂದ ವಿಶಿಷ್ಟ ವಾಗಿ ಅಲಂಕರಿಸಲಾಗಿತ್ತು.
* Live Juice ಗಳ ಒಟ್ಟು ಗ್ಲಾಸುಗಳ ಸಂಖ್ಯೆ ಇಪ್ಪತ್ತು ಸಾವಿರ ದಾಟಿತ್ತು.
*ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿತ್ತು.
* ಮಸೀದಿಯ ಅಂಗಳದಲ್ಲಿ ಅಂಗಶುಧ್ಧಿಗಾಗಿ ನಿರ್ಮಿಸಿದ ನಿರ್ಮಾಣಕ್ಕೆ ಗ್ಲಾಸಿನ ಛಾವಣಿ ಅಳವಡಿಸಾಗಿದೆ.
*ಮಸೀದಿಯು ಹವಾನಿಯಂತ್ರಿತ (AC)ವಾಗಿದೆ.
* ಮಸೀದಿಯ ಒಳಗೆ ದುಬಾರಿ ತುರ್ಕೀಸ್ ಒಳಹಾಸನ್ನು ಅಳವಡಿಸಲಾಗಿದೆ.
*ಒಟ್ಟಿನಲ್ಲಿ ಸುಳ್ಯದ ಮುಸ್ಲಿಂ ಸಮುದಾಯದಲ್ಲಿ ಹಬ್ಬದ ವಾತಾವರಣ ಕಂಡುಬಂದಿತ್ತು.