ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಏಕಹಾ ಭಜನಾ ಮಹೋನ್ನತ ಉದ್ಘಾಟನೆ…

ಬಂಟ್ವಾಳ : ನಿರಂತರ 24 ಗಂಟೆಗಳ ಏಕಾಹ ಭಜನೆ ಒಂದು ಕಾರ್ಯಕ್ರಮ ಮಾತ್ರವಲ್ಲ;
ಅದು ಶ್ರದ್ಧೆಯ ಅನಾವರಣ, ಸಂಘಟಿತ ಭಕ್ತಿಯ ಸಾಕ್ಷ್ಯ ಮತ್ತು ನಮ್ಮ ಸಂಸ್ಕೃತಿಯ ಜೀವಂತ ಪ್ರತಿಬಿಂಬ. ರಾತ್ರಿ–ಹಗಲು ಎನ್ನದೆ, ಸ್ವರ, ಲಯ ಮತ್ತು ಭಾವಗಳೊಂದಿಗೆ
ಭಕ್ತರು ನಡೆಸುವ ಈ ಪಯಣದಲ್ಲಿ ಮನಸ್ಸುಗಳನ್ನು ಶುದ್ಧಗೊಳಿಸುವ ಮಹಾಯಾತ್ರೆಯಾಗಲಿದೆ, ಸರ್ವರ ಶ್ರಮದಿಂದಲೇ ಭಕ್ತಿ ಶಬ್ದವಾಗಿ, ಶಬ್ದ ಶಕ್ತಿಯಾಗಿ,
ಶಕ್ತಿ ಶಾಂತಿಯಾಗಿ ಪರಿವರ್ತನೆಯಾಗಲಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು.
ಅವರು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಡಿಸೆಂಬರ್ 27 ಬೆಳಗ್ಗೆ ಸೂರ್ಯೋದಯದಿಂದ‌ ಡಿಸೆಂಬರ್ 28 ರ ಸೂರ್ಯೋದಯದ ವರೆಗೆ 24 ಗಂಟೆಗಳ ಕಾಲ 24 ಭಜನಾ ತಂಡಗಳಿಂದ ನಡೆದ ಏಕಾಹಭಜನಾ ಮಹೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ ಸದಸ್ಯರಾದ ಬಡಾಜೆಗುತ್ತು ರವಿಶಂಕರ್ ಶೆಟ್ಟಿ ಏಕಾಹ ಭಜನಾ ಮಹೋತ್ಸವ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಮೊಗರ್ನಾಡ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವೇದಮೂರ್ತಿ ಜನಾರ್ಧನ ಭಟ್, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಲೋಕೇಶ್ ಶಾಂತಿ ತಂತ್ರಿಗಳ ನೇತ್ರತ್ವದಲ್ಲಿ ಭಜನಾ ವೈದಿಕ ವಿಧಿವಿಧಾನಗಳು ನಡೆಯಿತು. ಅರ್ಚಕರು ತಿಲಕ್ ಶಾಂತಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ ಎಸ್., ಕೋಶಾಧಿಕಾರಿ ಸುನೀಲ್ ಕುಂದರ್, ಆಂತರಿಕ ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್, ಜತೆ ಕಾರ್ಯದರ್ಶಿ ಆನಂದ ಪೂಜಾರಿ ಶಂಬೂರು, ಕಾರ್ಯಕ್ರಮದ ಸಂಚಾಲಕರಾದ ಸತೀಶ್ ಕುಮಾರ್ ಅಮರ್, ಉಮೇಶ್ ನೆಲ್ಲಿಗುಡ್ಡೆ , ಬಿಲ್ಲವ ಮಹಿಳಾ ಸಮಿತಿ ಉಪಾಧ್ಯಕ್ಷರು ಭವಾನಿ ಕೆ, ಕಾರ್ಯದರ್ಶಿ ಮಲ್ಲಿಕಾ ಪಚ್ಚಿನಡ್ಕ, ಬಿಲ್ಲವ ಸಂಘದ ಕಾರ್ಯಾಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಧನ್ಯವಾದ ನೀಡಿದರು. ಯುವವಾಹಿನಿ ಬಂಟ್ವಾಳ ಘಟಕದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

whatsapp image 2025 12 30 at 9.15.49 am

Related Articles

Back to top button