ಅಡಪಂಗಾಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ…

ಸುಳ್ಯ: ಅಜ್ಜಾವರ ಗ್ರಾಮದ ಅಡಪಂಗಾಯದಲ್ಲಿ ಆದಿದ್ರಾವಿಡ ಯುವ ವೇದಿಕೆ ದ.ಕ ಜಿಲ್ಲೆ ಹಾಗೂ ಶ್ರೀ ದೇವಿ ಫ್ರೆಂಡ್ಸ್ ಅಡಪಂಗಾಯ ಇವರಿಂದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ ನಡೆಸಲಾಯಿತು.
ಕಾರ್ಯಕ್ರಮವನ್ನು ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪರ್ಚನೆ ಮಾಡಿ ಉದ್ಘಾಟಿಸಲಾಯಿತು.
ಆದಿದ್ರಾವಿಡ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ರಾಮಚಂದ್ರ ಐವರ್ನಾಡು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಭಾಷಣಕಾರರಾಗಿ ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಚಂದ್ರಶೇಖರ್ ಮೊರಂಗಲ್ಲು ವಹಿಸಿದ್ದರು ಹಾಗೂ ರಾಘವ ನೆಹರುನಗರ ಶೀನ ಬಯಂಬು, ನವೀನ್ ಅಡಪಂಗಾಯ, ಮುದಾರ ಅಡಪಂಗಾಯ, ರಮೇಶ್ ಬೂಡು ಉಪಸ್ಥಿತರಿದ್ದರು.
ಅತಿಥಿಗಳಿಗೆ ಆದಿದ್ರಾವಿಡ ಯುವ ವೇದಿಕೆಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಗೌರವಿಸಲಾಯಿತು.
ರವೀಶ್ ಸ್ವಾಗತಿಸಿ, ಸತೀಶ್ ಬಿಲಿಯಾರು ಕಾರ್ಯಕ್ರಮವನ್ನು ನಿರೂಪಿಸಿದರು. ವಂದನಾರ್ಪಣೆಯನ್ನು ಅಶ್ವಿನ್ ಅಜ್ಜಾವರ ನೆರವೇರಿಸಿಕೊಟ್ಟರು.

C2e08c7f 3c2a 4a1d 87fb 94934b51e415 300x224

Related Articles

Leave a Reply

Your email address will not be published. Required fields are marked *