ತುಂಬೆ ಡ್ಯಾಮ್ – ನ್ಯಾಯೋಚಿತ ಸೂಕ್ತ ಪರಿಹಾರಕ್ಕಾಗಿ ಮನವಿ…

ಬಂಟ್ವಾಳ:ತುಂಬೆ ಡ್ಯಾಮ್ ಸಂತ್ರಸ್ತರ ನಿಯೋಗ ಜಿಲ್ಲಾ ರೈತ ಸಂಘ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲಗುತ್ತು, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿ ಕಂಬಳ ಗುತ್ತು, ಬಂಟ್ವಾಳ ತಾಲೂಕು ಅಧ್ಯಕ್ಷ ಎನ್ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್ ಕೆ ಇದ್ದೀನಬ್ಬ ನೇತೃತ್ವದಲ್ಲಿ ಆ.3 ರಂದು ಭೇಟಿಯಾಗಿ ತುಂಬೆ ಡ್ಯಾಮ್ ಸಂತ್ರಸ್ತ ರೈತರಿಗೆ ಒರತೆ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರ ದೊರೆಯದಿರುವ ಬಗ್ಗೆ ಹಾಗೂ ಭೂ ಸವಕಳಿಗೆ ಶಾಶ್ವತ ತಡೆಗೋಡೆ ನಿರ್ಮಿಸಿ ಕೊಡುವ ಬಗ್ಗೆ ಲಿಖಿತ ಮನವಿ ಮೇಯರ್ ಜಯಾನಂದ ಅಂಚನ್ ಹಾಗೂ ಆಯುಕ್ತರಾದ ಆನಂದ ಸಿಎಲ್ ಇವರಿಗೆ ಅರ್ಪಿಸಲಾಯಿತು.
ಮನವಿ ಸ್ವೀಕರಿಸಿದ ಮೇಯರ್ ಹಾಗೂ ಆಯುಕ್ತರು ರೈತರಿಗೆ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಭಾಸ್ಕರ್, ದೇವಕಿ, ಸವಿತಾ, ಲೋಕಯ್ಯ, ಮೋಹಿದೀನಬ್ಬ, ಆನಂದ ಶೆಟ್ಟಿ, ರಮೇಶ್ ಭಂಡಾರಿ, ಗಂಗಾಧರ, ಸೋಮಶೇಖರಮಯ್ಯ ಮೊದಲಾದವರಿದ್ದರು.

Related Articles

Back to top button