ಆದರ್ಶ ಶಿಕ್ಷಕ ವಿಟ್ಲ ರಾಧಾಕೃಷ್ಣ ವರ್ಮರಿಗೆ ಸನ್ಮಾನ…
ಪುತ್ತೂರು.ಜ.2 :ಶಿಕ್ಷಕರಾಗಿ ಉತ್ತಮ ಸೇವೆ ನೀಡಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾದ ಆದರ್ಶ ಶಿಕ್ಷಕ ವಿ.ರಾಧಾಕೃಷ್ಣ ವರ್ಮ ಇವರನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ವಿಟ್ಲ ಮೇಗಿನ ಪೇಟೆ ಶಾಲೆಯಲ್ಲಿ ಸನ್ಮಾನಿಸಲಾಯಿತು.
ರಾಧಾಕೃಷ್ಣ ವರ್ಮರು ಕಂಬಳಬಟ್ಟು ಹಾಗೂ ವಿಟ್ಲ ಮೇಗಿನ ಪೇಟೆಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿ ದಶಂಬರ 31ಕ್ಕೆ ನಿವೃತ್ತಿ ಹೊಂದಿದರು.
ಸೇವಾವಧಿಯಲ್ಲಿ ಸ್ವತಃ ಕಲಾವಿದರಾಗಿದ್ದ ಇವರು ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧೆಗೆ ತರಬೇತು ಗೊಳಿಸಿದ್ದಲ್ಲದೆ ಶಾಲಾಭಿವೃದ್ಧಿಗೆ ಶ್ರಮಿಸಿದ್ದರು.ಸ್ಕೌಟ್ ಗೈಡ್ ಶಿಕ್ಷರಾಗಿ ಮಕ್ಕಳಿಗೆ ತರಬೇತಿ ನೀಡಿದ್ದರು.
ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಜಯಾನಂದ ಪೆರಾಜೆ ಅಭಿನಂದನಾ ಭಾಷಣ ಮಾಡಿದರು. ಅಧ್ಯಕ್ಷೆ ಸಹೋದ್ಯೋಗಿಯಾಗಿದ್ದ ಡಾ.ಶಾಂತಾ ಪುತ್ತೂರು ಸನ್ಮಾನ ಮಾಡಿ ಶುಭಹಾರೈಸಿ ಮಾತನಾಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷೆ ಆಶಾ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕಿ ಜಯಂತಿ ಸ್ವಾಗತಿಸಿದರು. ಸಹಶಿಕ್ಷಕಿ ಸವಿತಾ ನಿರೂಪಿಸಿದರು.ಪ್ರಮೀಳಾ ವಂದಿಸಿದರು. ಶಿಕ್ಷಕಿ ಪವಿತ್ರ ಗೌರಾವಾರ್ಪಣೆ ಮಾಡಿದರು.ವಿದ್ಯಾರ್ಥಿಗಳು ಗುರುವಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.






