ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವಕಾಲೇಜು- ತಂಬಾಕು ರಹಿತ ದಿನಾಚರಣೆ…
ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ವಿಟ್ಲ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಇದರ ವತಿಯಿಂದ ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವಕಾಲೇಜಿನಲ್ಲಿ ತಂಬಾಕು ರಹಿತ ದಿನಾಚರಣೆ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಜೂ.13 ರಂದು ಹಮ್ಮಿಕೊಳ್ಳಲಾಗಿತ್ತು.
ಬಂಟ್ವಾಳ ನೇತ್ರಾವತಿ ಸಂಗಮ ಸೀನಿಯರ್ ಛೇಂಬರ್ ನ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ದುಶ್ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ಡಾ. ಮನೋಹರ್ ರೈ ಆರೋಗ್ಯ ಸಂರಕ್ಷಣೆಯ ಬಗ್ಗೆ ತಿಳಿಸಿ ಮಳೆಗಾಲದಲ್ಲಿ ಬರುವ ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದರು.
ಗ್ರಾಮಾಭಿವೃದ್ಧಿ ಯೋಜನೆಯ ಪೆರ್ನೆ ಒಕ್ಕೂಟದ ವಲಯಾಧ್ಯಕ್ಷ ರಾಬರ್ಟ್ ಫೆರ್ನಾಂಡಿಸ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಲಯ ಮೇಲ್ವಚಾರಕಿ ಶಾರದಾ ಎ. ವಿವಿಧ ಯೋಜನೆಗಳ ಪ್ರಯೋಜನವನ್ನು ತಿಳಿಸಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಕೃಷ್ಣಪ್ಪ , ಸೇವಾ ಪ್ರತಿನಿಧಿ ತ್ರಿವೇಣಿ ,ಕಾರ್ಯದರ್ಶಿ ಗಿರಿಯಪ್ಪ , ಕೋಶಾಧಿಕಾರಿ ಸರಸ್ವತಿ ವೇದಿಕೆಯಲ್ಲಿದ್ದರು.