ಎಫ್ ಪಿಒ ನಿರ್ವಹಣೆ ಮಾಹಿತಿ ಕಾರ್ಯಾಗಾರ…

ಬಂಟ್ವಾಳ: ರೈತ ಉತ್ಪಾದಕ ಸಂಸ್ಥೆಗಳು ಕೃಷಿ ಉತ್ಪನ್ನವನ್ನು ಉತ್ತಮ ಧಾರಣೆಯೊಂದಿಗೆ ಮಾರುಕಟ್ಟೆಗೆ ತಲುಪಿಸುವಲ್ಲಿ ರೈತ ಮತ್ತು ಬಳಕೆದಾರರ ನಡುವಿನ ಕೊಂಡಿಯಾಗಬೇಕು ಎಂದು ರಾಜ್ಯ ರೈತ ಉತ್ಪಾದಕ ಸಹಕಾರ ಸಂಘಗಳ ನಿರ್ದೇಶಕ ವೀರಪ್ಪ ಗೌಡ ಕಣ್ಕಲ್ ಹೇಳಿದರು.
ಅವರು ಸೆ.9ರಂದು ಬಿ.ಸಿ.ರೋಡ್ ಅಂಬೇಡ್ಕರ್ ಭವನದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ನಿರ್ವಹಣೆ, ಆಡಳಿತ ಮಂಡಳಿ, ಸದಸ್ಯರ ಪಾತ್ರ ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಎಪ್ ಪಿಒ ಪ್ರಸ್ತುತತೆ ಬಹಳಷ್ಟಿದೆ . ಸದಸ್ಯರು ಸಂಸ್ಥೆಯ ವ್ಯವಹಾರದಲ್ಲಿ ತೊಡಗಿಕೊಳ್ಳಬೇಕು ಎಂದರು.

ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ. ಆರ್. ದೀಪ ಬೆಳಗಿಸಿ ಉದ್ಘಾಟಿಸಿದರು.
ಬೊಲ್ಪು ಎಫ್ ಪಿ ಒ ಅಧ್ಯಕ್ಷ ರಾಜ್ ಬಂಟ್ವಾಳ್ ಬಳಿಕ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾವಯವ ಕೃಷಿಕ ಸನತ್ ಕುಮಾರ್ ರೈ ಅನಂತಾಡಿ, ತರಕಾರಿ ಕೃಷಿಕ ರಾಮಣ್ಣ ಸಪಲ್ಯ ನಾವೂರ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ನಿರ್ದೇಶಕರಾದ ಜಗನ್ನಾಥ ಚೌಟ ಬದಿಗುಡ್ಡೆ, ಸದಾನಂದ ಡಿ. ಶೆಟ್ಟಿ ರಂಗೋಲಿ, ಅರ್ವಿನ್ ಡಿಸೋಜ, ಸೀತಾರಾಮ ಶೆಟ್ಟಿ ಸಜೀಪ, ಜಗದೀಶ ಭಂಡಾರಿ ಕುರಿಯಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕರಾದ ದೇವಪ್ಪ ಕುಲಾಲ್ ಪಂಜಿಕಲ್ ಸ್ವಾಗತಿಸಿ, ವಿಜಯ ರೈ ವಾಮದಪದವು ವಂದಿಸಿದರು. ಸಿಇಒ ಹರ್ಪಿತ್ ಕುಮಾರ್ ನೋಟೀಸ್ ಓದಿ ಲೆಕ್ಕಪತ್ರ ಮಂಡಿಸಿದರು. ಕೃಷ್ಣಪ್ಪ ಸಪಲ್ಯ ಅಂತರ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button