ಮೊಯಿದೀನ್ ಬಾವಾರಿಂದ 20 ಸಾವಿರ ಕುಟುಂಬಗಳಿಗೆ 2 ಕೋಟಿ ರೂ. ಆಹಾರ ಸಾಮಗ್ರಿ ವಿತರಣೆ….
ಸುರತ್ಕಲ್: ಮಾಜಿ ಶಾಸಕ ಮೊಯಿದೀನ್ ಬಾವಾ ಅವರು ಮಂಗಳೂರು ಉತ್ತರ ಕ್ಷೇತ್ರದ ಅರ್ಹ 20 ಸಾವಿರ ಕುಟುಂಬಗಳಿಗೆ 2 ಕೋಟಿ ರೂ. ಮೊತ್ತದ ಆಹಾರ ಸಾಮಗ್ರಿಗಳನ್ನು ವಿತರಿಸಲು ಆರಂಭಿಸಿದ್ದಾರೆ.
ಸುರತ್ಕಲ್ ಸಮೀಪದ ಜನತಾ ಕಾಲನಿಯಲ್ಲಿ ಸೌಹಾರ್ದದ ಸಂಕೇತವಾಗಿ ಮೂರು ಧರ್ಮಗಳ ಗುರುಗಳ ಸಮ್ಮುಖ ಬೃಹತ್ ನೆರವು ಕಾರ್ಯ ಆರಂಭಿಸಿದ್ದೇವೆ. ಸುರತ್ಕಲ್, ಗುರುಪುರ ಬ್ಲಾಕ್, ಮಂಗಳೂರಿನ ಬೆಂಗ್ರೆ ಸಹಿತಿ ವಿವಿಧೆಡೆ ಅರ್ಹ ಫಲಾನುಭವಿಗಳಿಗೆ ಹಂಚಲಿದ್ದೇವೆ. ಇದಕ್ಕಾಗಿ 2 ಕೋಟಿ ರೂ. ಮೌಲ್ಯದ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಬಾವಾ ತಿಳಿಸಿದ್ದಾರೆ.
ಕೋವಿಡ್ 19 ನಿವಾರಣೆಗಾಗಿ ನಾವು ಸರಕಾರಗಳ ಆದೇಶವನ್ನು ತಪ್ಪದೆ ಪಾಲಿಸ ಬೇಕು. ದೇಶದ ಒಳಿತಿಗಾಗಿ ಎಲ್ಲರೂ ತ್ಯಾಗ ಮಾಡಲೇಬೇಕು. ಇದಕ್ಕಾಗಿ ನಾವು ಜಾಗೃತಿ ಪೋಸ್ಟರ್‌ಗಳನ್ನು ಪ್ರತೀ ಮನೆಗೆ ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.
ಸುರತ್ಕಲ್ ಚರ್ಚಿನ ಧರ್ಮಗುರು ವಂ| ಪೌಲ್ ಡಿ’ಸೋಜಾ, ಚೊಕ್ಕಬೆಟ್ಟು ಮಸೀದಿಯ ಧರ್ಮಗುರು ಅಬ್ದುಲ್ ಅಝೀಝ್ ದಾರಿಮಿ, ಕಾನ ಅಬ್ಬಗದಾರ ಕ್ಷೇತ್ರದ ಆಡಳಿತ ಮೊಕ್ತೇಸರ ಚಿನ್ನಯ್ಯ ಮಾಡ, ಮುಖಂಡರಾದ ಕೆ. ಸದಾಶಿವ ಶೆಟ್ಟಿ, ಪ್ರತಿಭಾ ಕುಳಾಯಿ, ಕಾರ್ಪೊರೇಟರ್ ಅನಿಲ್ ಕುಮಾರ್, ರಾಜೇಶ್ ಕುಳಾಯಿ, ಹ್ಯಾರಿಸ್, ಹಿದಾಯತ್, ರಾಜ, ಮೆಹಸೂಫ್, ಶೋಯಿಬ್ ಉಪಸ್ಥಿತರಿದ್ದರು.