ಟಿ. ಎಂ. ಶಹೀದ್ ತೆಕ್ಕಿಲ್‌ರವರ ಹುಟ್ಟುಹಬ್ಬ- ಸಂಭ್ರಮದ ವರ್ಷಾಚರಣೆಯ ಸಮಾರೋಪ…
ಸುಳ್ಯ:ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೃಷಿ, ಸಹಕಾರಿ, ಕ್ರೀಡಾ ಕ್ಷೇತ್ರದಲ್ಲಿ ಕಳೆದ 3 ದಶಕಗಳ ಕಾಲ ಕ್ರಿಯಾಶೀಲರಾಗಿರುವ ಅರಂತೊಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ರವರ ಹುಟ್ಟುಹಬ್ಬದ ಸುವರ್ಣ ಸಂಭ್ರಮದ ವರ್ಷಾಚರಣೆಯು ದಿನಾಂಕ 21/01/2021 ರಿಂದ ಪ್ರಾರಂಭಗೊಂಡು ದಿನಾಂಕ 21/01/2022 ರವರರೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಕ್ರಿಡಾ ಚಟುವಟಿಕೆಗಳೊಂದಿಗೆ ಒಂದು ವರ್ಷಗಳಕಾಲ ವಿವಿಧ 46 ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
ಹುಟ್ಟುಹಬ್ಬದ ಸಂಭ್ರಮದ ವರ್ಷಾಚರಣೆ ಅಂಗವಾಗಿ ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ತು ಫಾತಿಮಾ ಎಂಬ ಮಹಿಳೆಗೆ ರೂ.6 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ, ಅನಾಥ ಹಾಗೂ ಬಡಮಹಿಳೆಯರ ಮನೆ ದುರಸ್ತಿಗಳಿಗೆ ರೂ. 1,83,500-/ ಸಹಾಯಧನ, ಅನಾರೋಗ್ಯ ಪೀಡಿತರ ಚಿಕಿತ್ಸಾ ವೆಚ್ಚಕ್ಕಾಗಿ ರೂ. 1,07,500-/ ಬಡ ಹೆಣ್ಣಮಕ್ಕಳ ವಿವಾಹ ಕಾರ್ಯಗಳಿಗೆ ರೂ. 1,02,500-/ ಸಹಾಯಧನ, ಸಂಘ ಸಂಸ್ಥೆಗಳ ಕ್ರಿಡಾ ಚಟುವಟಿಕೆಗಳಿಗೆ ರೂ. 1 ಲಕ್ಷ, SSF ಸುಳ್ಯ ಶಾಖೆಗೆ ವೀಲ್ ಚಯರ್ ಮತ್ತು ಕಾಡು ಕಡೆಯುವ ಮಿಷನ್ ಖರೀದಿಗೆ ರೂ.26,000-/, SKSSF ಸುಳ್ಯ ಶಾಖೆ ವೀಲ್ ಚಯರ್ ಖರೀದಿಗೆ ಮತ್ತು ಕಲ್ಲುಗುಂಡಿ ಶಾಖೆಯ ಕಛೇರಿಗೆ ಚಯರ್ ಖರೀದಿಗೆ ರೂ.25,000-/ ಸಹಾಯಧನ, ಕೋವಿಡ್ ಸಂಕಷ್ಟಕ್ಕೆ ಒಳಗಾದ ಸಾರ್ವಜನಿಕರಿಗೆ ಮತ್ತು ಅರಂತೋಡು ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ನ ಕೋವಿಡ್ ಪರಿಹಾರ ನಿಧಿಗೆ ಒಟ್ಟು ರೂ. 1,25,000-/ ಮೊತ್ತದ ಸಹಾಯಧನ, ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ರೂ.25,000-/,ಹೀಗೆ ಒಂದು ವರ್ಷದಲ್ಲಿ ಸುಮಾರು 15 ಲಕ್ಷ ಮೊತ್ತದ ಸಹಾಯಧನವನ್ನು ವಿನಿಯೋಗಿಸಲಾಗಿದೆ.
ಇದೀಗ ಕೋವಿಡ್ 3 ನೇ ಅಲೆಯ ಹಿನ್ನಲೆಯಲ್ಲಿ ದಿನಾಂಕ 21/01/2022 ರಂದು ಟಿ. ಎಂ. ಶಹೀದ್ ತೆಕ್ಕಿಲ್ ರವರ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು 50 ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತವಾಗಿ ಟಿ.ಎಂ.ಶಹೀದ್ ತೆಕ್ಕಿಲ್ ಹುಟ್ಟುಹಬ್ಬ ಸಂಭ್ರಮದ ಅಭಿನಂದನಾ ಸಮಿತಿಯು ಹಮ್ಮಿಕೊಂಡ 50 ವಿವಿಧ ಕಾರ್ಯಕ್ರಮಗಳಲ್ಲಿ ಈಗಾಗಲೇ 46 ಕಾರ್ಯಕ್ರಗಳನ್ನು ನಡೆಸಲಾಗಿದ್ದು ಕೋವಿಡ್ ಅಲೆಯು ಕಡಿಮೆಯಾದ ನಂತರ ಮುಂದಿನ ದಿನದಲ್ಲಿ ಸ್ಮರಣಸಂಚಿಕೆ ಬಿಡುಗಡೆ, ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭವನ್ನು ನಡೆಸಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರವನ್ನು ಕೋರುತ್ತೇವೆ. ಕೋವಿಡ್ ಹಿನ್ನಲೆಯಲ್ಲಿ ಟಿ.ಎಂ.ಶಹೀದ್ ತೆಕ್ಕಿಲ್ ರವರ ಹುಟ್ಟುಹಬ್ಬವನ್ನು ಸರಳವಾಗಿ ಶುಭಾಷಯಗಳೊಂದಿಗೆ ಆಚರಿಸಲಾಗುವುದು ಮತ್ತು ಶುಭಾಷಯವನ್ನು ಕೋರುವವರು ದೂರವಾಣಿ ಮೂಲಕ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಕೋರಬಹುದಾಗಿದೆ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ಸುವರ್ಣಸಂಭ್ರಮ ಅಭಿನಂದನಾ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ, ಕಾರ್ಯದರ್ಶಿ ಕೆ.ಟಿ.ವಿಶ್ವನಾಥ, ಕೋಶಾಧಿಕಾರಿ ಎಸ್.ಎಂ.ಅಬ್ದುಲ್ ಮಜೀದ್, ಸಂಚಾಲಕರಾದ ಅಶ್ರಫ್ ಗುಂಡಿ ರವರು ತಿಳಿಸಿರುತ್ತಾರೆ.