ಮಾರ್ಚ್ 31 ರವರೆಗೆ ದೇಶದಾದ್ಯಂತ ರೈಲು ಸೇವೆ ಬಂದ್….
ನವದೆಹಲಿ : ಕೊರೊನಾ ವೈರಸ್ ಹಬ್ಬುವ ಹಿನ್ನಲೆಯಲ್ಲಿ ಮಾರ್ಚ್ 31 ರ ತನಕ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರ ಬಂದ್ ಆಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಾರ್ಚ್ 31 ರ ಬಳಿಕ ಮತ್ತೊಮ್ಮೆ ಸಭೆ ಸೇರಲಿರುವ ರೈಲ್ವೆ ಮಂಡಳಿಯು ರೈಲು ಬಂದ್ ಮುಂದುವರಿಸಬೇಕೇ, ಬೇಡವೇ ಎಂದು ನಿರ್ಧರಿಸಲಿದೆ. ಕೇವಲ ಸರಕು ಸಾಗಣಿಕ ರೈಲುಗಳು ಮಾತ್ರ ಸಂಚಾರ ಮಾಡಲಿದೆ ಎಂದು ಇಲಾಖೆ ಹೇಳಿದೆ.
Sponsors