ನಮ್ಮ ದೇಶದ ಪ್ರಧಾನಿ ಕೂಡ ಡೊನಾಲ್ಡ್ ಟ್ರಂಪ್ ಹಾದಿಯನ್ನೇ ಹಿಡಿಯುತ್ತಾರೋ ಎಂಬ ಅನುಮಾನ – ಎಂ.ವೆಂಕಪ್ಪ ಗೌಡ…
ಸುಳ್ಯ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕರೋನಾ ರೋಗವನ್ನು ತೀರ ನಿರ್ಲಕ್ಷಿಸಿದ್ದರು ಮತ್ತು ಆ ಕಾರಣಕ್ಕಾಗಿ ತನ್ನ ಅಧಿಕಾರವನ್ನು ಕಳಕೊಂಡರು. ಈಗ ನಮ್ಮ ದೇಶದ ಪ್ರಧಾನಿ ಕೂಡ ಅದೇ ಹಾದಿಯನ್ನೇ ಹಿಡಿಯುತ್ತಾರೋ ಎಂಬ ಅನುಮಾನ ದೇಶದ ಜನರ ಮನಸ್ಸಿನಲ್ಲಿ ಮೂಡಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಧಾನಿಯವರು ಕೂಡಾ ಕರೋನಾ ರೋಗದ 2 ನೇ ಅಲೆಯನ್ನು ನಿಯಂತ್ರಣ ಮಾಡುವ ಬದಲು ಅದನ್ನು ಮರೆತು ದೇಶದಲ್ಲಿ ಚುಣಾವಣೆ ನಡೆಸುವರೆ ಉತ್ಸುಕರಾದರು. ಪರಿಣಾಮ ಪಂಚರಾಜ್ಯಗಳ ಚುಣಾವಣೆ ಮುಗಿಯುವ ವೇಳೆಗೆ ಕೊರೊನಾ ರೋಗ ದೇಶದಲ್ಲಿ ರುದ್ರ ನರ್ತನವನ್ನೇ ಮಾಡತೊಡಗಿತು. ಇದರ ಪರಿಣಾಮ ದೇಶದಲ್ಲಿ ರೋಗ ನಿಯಂತ್ರಣಕ್ಕೆ ಬಾರದೆ, ರೋಗಿಗಳಿಗೆ ಚಿಕೆತ್ಸೆ ಸಿಗದೆ ಬೀದಿ ಬೀದಿಗಳಲ್ಲಿ ಹೆಣಗಳು ಬೀಳುವ ಪರಿಸ್ಥಿತಿ ನಿರ್ಮಾಣವಾಯಿತು. ಇನ್ನೊಂದೆಡೆ ಹೆಣ ಸುಡಲು ಶ್ಮಶಾನಕ್ಕೆ ಹೋದರೆ ಅಸ್ಪತ್ರೆಯ ಅರ್ಧ ಖರ್ಚು ಹೆಣ ಸುಡಲು ತಗಲುವುದೇ ವಿಪರ್ಯಾಸ !. ಅಷ್ಟಕ್ಕೂ ಹೆಣ ಸುಡಲು ಬುಕ್ ಮಾಡಿ ದಿನಗಟ್ಟಲೆ ತಮ್ಮ ಸರದಿಗಾಗಿ ಕಾಯಬೇಕಾಗಿರೋದು, ಕೆಲವು ರಾಜ್ಯಗಳಲ್ಲಂತೂ ಸುಡಲು ಜಾಗವಿಲ್ಲದೆ ಹೆಣವನ್ನು ನದಿಗೆ ಬಿಸಾಡುವ ಪರಿಸ್ಥಿತಿ ನಿರ್ಮಾಣವಾಗಿರುದು ವ್ಯವಸ್ಥೆಯನ್ನು ಅಣಕಿಸುವಂತಿದೆ . ಇನ್ನೊಂಡೆದೆ ಹೆಣ ಸಾಗಿಸಲು ಆಂಬುಲೆನ್ಸ್ ಸಿಗದೆ ಆಟೋದಲ್ಲಿ , ಎತ್ತಿನಗಾಡಿಯಲ್ಲಿ ,ಮೋಟಾರ್ ಬೈಕ್ ನಲ್ಲಿ ಸಾಗಿಸಬೇಕಾದ ದುಸ್ಥಿತಿ ಈ ದೇಶದಲ್ಲಿ ಬಂದೊದಗಿದೆ . ಬದುಕುಳಿದ ಜನರು ಚಿಕೆತ್ಸೆಗೆ ಆಕ್ಸಿಜನ್ ಸಿಗದೆ ಬೀದಿ ಬೀದಿಯಲ್ಲಿ ಅಲೆದಾಡಿ, ಅಲ್ಲೊ ಇಲ್ಲೋ ಸಿಕ್ಕಿದ ಆಕ್ಸಿಜನ್ ಸಿಲಿಂಡರ್ ನ್ನು ತಮ್ಮ ವಾಹನದಲ್ಲಿ ಅಸ್ಪತ್ರೆ ಯ ಆವರಣದಲ್ಲಿ , ಬೀದಿಯಲ್ಲಿ ಇಟ್ಟುಕೊಂಡು ಆಸ್ಪತ್ರೆಯ ಬೆಡ್ ಗಾಗಿ ಕಾಯುತ್ತ ಆಸ್ಪತ್ರೆಯ ಸಿಬ್ಬಂದಿಗಳ ಕಾಲಿಗೆ ಬಿದ್ದು ಬೇಡಿಕೊಳ್ಳುವ ಹ್ರದಯವಿದ್ರಾವಕ ಘಟಣೆಗಳು ಮಾದ್ಯಮದಲ್ಲಿ ಭಿತ್ತರಿಸುತ್ತಿರುವುದನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ ಎಂದೂ ಎಂದೂ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಮತ್ತೊಂದೆಡೆ ಕೊರೋನಾದಿಂದ ಕಂಗೆಟ್ಟ ಜನತೆಯ ಸಹಾಯಕ್ಕಾಗಿ ನಯಾ ಪೈಸೆಯನ್ನು ನೀಡದೆ ದೇಶದ ಜನರ ತೆರಿಗೆ ಹಣವನ್ನು ತಮ್ಮ ವೈಯುಕ್ತಿಕ ಪ್ರತಿಷ್ಠೆ ಬೆಳೆಸಿಕೊಳ್ಳುವುದಕ್ಕೆ ಮತ್ತು ಚುನಾವಣೆಗಾಗಿಯೇ ಖರ್ಚು ಮಾಡಿ ಇದೀಗ ಕೊರೊನಾ ಸಂಕಷ್ಟ ಕಾಲದಲ್ಲಿ ಅದರ ನಿರ್ವಹಣೆ ಮಾಡುವಲ್ಲಿ ಎಲ್ಲವೂ ಆಯಾ ರಾಜ್ಯಗಳಿಗೆ ಸಂಬಂಧಿಸಿದ್ದು ಎಂದು ಹೇಳಿ ಕೈ ತೊಳೆದು ಕೊಂಡುಬಿಟ್ಟಿದ್ದು ಅಲ್ಲದೆ, ನೊಂದ ಜೀವ ಕಳಕೊಂಡ ಕುಟುಂಬಕ್ಕೆ ಅಥವಾ ಆಸ್ಪತ್ರೆಯಲ್ಲಿ ನರಳುತ್ತಿರುವಾಗ ರೋಗಿಗಳಿಗೆ ಏನನ್ನೂ ನೀಡದೇ ಇರುವುದು ತೀರ ನೋವಿನ ಸಂಗತಿ. ಹಾಗಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರಿಸ್ಥಿತಿ ನಮ್ಮ ಪ್ರಧಾನಿ ಗೂ ಬಂದರೆ ಆಶ್ಚರ್ಯ ಇಲ್ಲ ಎಂದು ಎಂ.ವೆಂಕಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.