ಪೇರಡ್ಕ ಮೋಹಿಯದ್ದಿನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಣೆ…
ಸುಳ್ಯ: ಇತಿಹಾಸ ಪ್ರಸಿದ್ದ ಪೇರಡ್ಕ ಮೋಹಿಯದ್ದಿನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದಿಂದ ಈದ್ ಆಚರಿಸಲಾಯಿತು.
ಖತೀಬ್ ರಿಯಾಝ್ ಫೈಝಿ ಎಮ್ಮೆಮಾಡು ಈದ್ ಸಂದೇಶ ನೀಡಿದರು ಪ್ರತಿಯೊಬ್ಬರೂ ಪರಸ್ಪರ ಸಹೋದರತೆಯಿಂದ ಕೋಮು ಸೌಹಾರ್ದತಯನ್ನು ಕಾಪಾಡಲು ಮತ್ತು ಹಬ್ಬದ ಮಹತ್ವವನ್ನು ವಿವರಿಸಿ ಮಸ್ಜಿದ್ ಮದರಸ ದರ್ಗಾ ಹಾಗೂ ಊರಿನ ಅಭಿವೃದ್ಧಿಗೆ ದುಡಿದ ಹಿರಿಯರನ್ನು ಸ್ಮರಿಸಿ ಖಬರ್ ಸಿಯಾರತ್ ನೊಂದಿಗೆ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸಿದರು .
ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರು ಜಮಾಅತ್ ನ ಗೌರವ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್, ಅಧ್ಯಕ್ಷರಾದ ಅಲಿ ಹಾಜಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಜಮಾತಿನ ಕಾರ್ಯದರ್ಶಿ ಟಿ ಎಂ ಅಬ್ದುಲ್ ರಝಾಕ್ ಹಾಜಿ, ಎಂ ಆರ್ ಡಿ ಎ ಅಧ್ಯಕ್ಷರಾದ ಜಾಕೀರ್ ಹುಸೈನ್, ಇಬ್ರಾಹಿಮ್ ಹಾಜಿ ಕರಾವಳಿ, ಪಾಂಡಿ ಅಬ್ಬಾಸ್, ಆಶ್ರಫ್ ಪೇರಡ್ಕ, ಟಿ ಎಂ ಮೊಹಮ್ಮದ್ ಕುಂಞ ತೆಕ್ಕಿಲ್ , ಪಿ ಕೆ ಉಮ್ಮರ್ ಗೂನಡ್ಕ, ನೂರುದ್ದೀನ್ ಅನ್ಸಾರಿ, ಎಸ್ ಇಬ್ರಾಹಿಂ ಪೇರಡ್ಕ, ಟಿ ಎಂ ಉಮ್ಮರ್ ತೆಕ್ಕಿಲ್ ಡಿ ಮಾಯ್ದು ದರ್ಕಸ್, ಟಿ ಬಿ ಹನೀಫ್ ತೆಕ್ಕಿಲ್ ಅಬ್ದುಲ್ ಖಾದರ್ ದರ್ಕಾಸ್ ಸರಕಾರಿ ಉದ್ಯೋಗಿಗಳಾದ ಜಾಫರ್ ಪೇರಡ್ಕ ,ರಝಾಕ್ ಟಿ ಎ, ಉಂಬಾಯಿ ಚೆರೂರ್ ಜಮಾತಿನ ,ಎಸ್ ಕೆ ಎಸ್ ಎಸ್ ಎಫ್ ನ, ಎಂ ಆರ್ ಡಿ ಎ ಯ ಪದಾಧಿಕಾರಿಗಳು ಉಪಸ್ಥಿತರಿದ್ದು ಪ್ರತಿಯೊಬ್ಬರೂ ಪರಸ್ಪರ ಈದ್ ಸಂದೇಶವನ್ನು ಪರಸ್ಪರ ಹಂಚಿಕೊಂಡರು.