ಸುಳ್ಯ – ಕೆ.ವಿ.ಜಿ ಪಾಲಿಟೆಕ್ನಿಕ್ ಇದರ ಉಪ ಪ್ರಾಂಶುಪಾಲರಾಗಿ ಅಣ್ಣಯ್ಯ.ಕೆ ನೇಮಕ…

ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಕಮಿಟಿ “ಬಿ” ಇದರ ಆಡಳಿತದಲ್ಲಿ ನಡೆಯುತ್ತಿರುವ ಕೆ.ವಿ.ಜಿ ಪಾಲಿಟೆಕ್ನಿಕ್ (ಸರಕಾರಿ ಅನುದಾನಿತ) ಸುಳ್ಯ ಇದರ ಉಪ ಪ್ರಾಂಶುಪಾಲರಾಗಿ ಅಟೊಮೋಬೈಲ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಅಣ್ಣಯ್ಯ.ಕೆ ಇವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ
“ಬಿ” ಇದರ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಪದೋನ್ನತಿ ನೀಡಿ
ನೇಮಕಗೊಳಿಸಿದ್ದಾರೆ.
ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಪದವಿಯನ್ನು ಪಡೆದು 1988 ಜನವರಿ 4ರಂದು ಕೆ.ವಿ.ಜಿ ಪಾಲಿಟೆಕ್ನಿಕ್ ಗೆ ಉಪನ್ಯಾಸಕರಾಗಿ ಸೇರ್ಪಡೆಗೊಂಡ ಇವರು 2010 ರಿಂದ ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಡಬ ತಾಲೂಕು ಕುಂಡಡ್ಕ ಮನೆತನದ ಬಾಬುಗೌಡ
ಮತ್ತು ಪೊನ್ನಕ್ಕ ದಂಪತಿಗಳ ಪುತ್ರ.