ಸಂಪಾಜೆ ಗ್ರಾಮ ಪಂಚಾಯತ್ -29 ಜನ ಪಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ…

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ 29 ಜನ ಪಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ 6 ಜನ ಅಂಗವಿಕಲರಿಗೆ ಗೋದ್ರೇಜ್, ಒಬ್ಬರಿಗೆ ಮಂಚ ವಿತರಣೆ ಕಾರ್ಯಕ್ರಮ ನಡೆಯಿತು.
ಸವಲತ್ತು ಬಗ್ಗೆ ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಆರ್. ಎಮ್. ಎಸ್. ಎ. ಪ್ರೌಢಶಾಲೆ ಯಲ್ಲಿ ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಕ್ಷಾ ರವರಿಗೆ ಸನ್ಮಾನ ಮಾಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷತೆ ವಹಿಸಿ ಜಿ. ಕೆ.ಹಮೀದ್ ಮಾತನಾಡಿ ಗ್ರಾಮದ ಸಮಗ್ರ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದ್ದು, ಮನೆ ಮನೆಗೆ ಕುಡಿಯುವ ನೀರು ತಲುಪಿಸಲು ವ್ಯವಸ್ಥೆ ರೂಪಿಸಲಾಗಿದೆ ಎಂದರು. ಹಕ್ಕು ಪತ್ರ ಪಡೆದ ಪಲಾನುಭವಿಗಳು ಸೂಕ್ತ ರೀತಿಯಲ್ಲಿ ಮನೆ ನಿರ್ಮಾಣ ಮಾಡಿ ಎಂದರು. ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಸುಂದರಿ ಮುಂಡಡ್ಕ ಜಗದೀಶ್ ರೈ ಎಸ್. ಕೆ. ಹನೀಫ್, ಸವಾದ್, ಅನುಪಮಾ, ವಿಮಲಾ ಪ್ರಸಾದ್, ವಿಜಯ ಅಲಡ್ಕ ಸುಮತಿ ಶಕ್ತಿವೇಲು, ಉಪಸ್ಥಿತರಿದ್ದರು ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ. ಸವಾದ್ ಗೂನಡ್ಕ ವಂದಿಸಿದರು.

IMG 20220527 WA0013 300x135 IMG 20220527 WA0014 300x135

IMG 20220527 WA0015 300x135

Related Articles