ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ಕೇರಳ ಪಿಸಿಸಿ ವತಿಯಿಂದ ಬದಿಯಡ್ಕದಲ್ಲಿ ಸನ್ಮಾನ…
ಬದಿಯಡ್ಕ: ಟಿ ಎಂ ಶಾಹಿದ್ ತೆಕ್ಕಿಲ್ ಅಧ್ಯಕ್ಷರು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಹಾಗೂ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅವರನ್ನು ಇಂದು ಬದಿಯಡ್ಕದಲ್ಲಿ ಯುಡಿಫ್ ವತಿಯಿಂದ ನಡೆದ ಪಕ್ಷದ ಕಾರ್ಯಕರ್ತರ ಕಾರ್ಯಗಾರ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಮಾಜಿ ವಿರೋಧ ಪಕ್ಷ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿಯಾದ ರಮೇಶ್ ಚೆನ್ನಿತ್ತಿಲ ಶಾಲು ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಅವರು ಶಾಹೀದ್ ಅವರ ಸುದೀರ್ಘ ಕಾಲ ಪಕ್ಷ ಸೇವೆ ಹಾಗು ಸಂಘಟನಾ ಚತುರತೆ ಬಗ್ಗೆ ಅಭಿನಂದನೆ ಸಲ್ಲಿಸಿ ಕರ್ನಾಟಕ ಹಾಗು ಕೇರಳ ರಾಜ್ಯದ ಜನಪ್ರಿಯ ನಾಯಕ ಗಡಿ ನಾಡಿನ ಹೆಮ್ಮೆ ಶಾಹಿದ್ ಮುಂದೆ ಉನ್ನತ ಹುದ್ದೆ ಆಲಂಕರಿಸಲಿ ಎಂದು ತಿಳಿಸಿ ನೆರೆದ ಸಾವಿರಾರು ಕಾರ್ಯಕರ್ತರಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿ ಗೌರವ ಸಲ್ಲಿಸಲು ಸೂಚಿಸಿ ಶಾಹಿದ್ ಅವರನ್ನು ಗೌರವಿಸಿದರು, ಕನ್ನಡದಲ್ಲಿ ಮಾತನಾಡಿಸಿ ಮುಂದಿನ ಕೇರಳ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸಲು ವಿನಂತಿಸಿ ಶುಭ ಹಾರೈಸಿದರು, ಸಂಸದರಾದ ರಾಜ್ ಮೋಹನ್ ಉಣ್ಣಿತ್ತಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನೀಲಕಂಠನ್ ರಾಮಕೃಷ್ಣ, ಡಿಸಿಸಿ ಅಧ್ಯಕ್ಷರಾದ ಫೈಸಲ್,ಶಾಸಕ ಎನ್ ಎ ನೆಲ್ಲಿಕುನ್ನ್,ಕಾಸರಗೋಡಿನ ಯು ಡಿ ಎಫ್ ಮುಖಂಡರಾದ ಮಾಹಿನ್ ಕಲ್ಲಟ್ರ, ಮಾಹಿನ್ ಕೇಳೋಟ್, ಖಾದರ್ ಮಾನ್ಯ, ಬದಿಯಡ್ಕ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾಂತ, ಶಾಂತರಮ್ ಮನಿಯಾಣಿ ಸಹಿತ ಹಲವಾರು ನಾಯಕರು ಉಪಸ್ಥಿತರಿದ್ದರು.






