ಬ್ರಹ್ಮರಕೋಟ್ಲು ಟೋಲ್ ನಲ್ಲಿ ತುರ್ತು ವಾಹನಗಳಿಗೆ ಅಡಚಣೆ-ಸುಳ್ಯ ಅಂಬುಲನ್ಸ್ ಚಾಲಕ ಮಾಲಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ…
ಜೂನ್ 1 ರ ಒಳಗೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ...

ಮಂಗಳೂರು:ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ಗಾಂಧಿನಗರದಲ್ಲಿ ರಸ್ತೆ ನಡುವೆ ಉದ್ದವಾಗಿ ಗುಂಡಿ ತೋಡಿ ಬಿಟ್ಟಿರುವುದು, ಮಾಣಿಯಿಂದ ಬಿಸಿರೋಡ್ ವರೆಗೆ ರಸ್ತೆ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ತೊಂದರೆ, ಆಂಬ್ಯುಲೆನ್ಸ್ ನಲ್ಲಿ ತುರ್ತು ರೋಗಿಯನ್ನು ಕರೆದುಕೊಂಡು ಹೋಗಲು ಸಾಧ್ಯವಾಗುದಿಲ್ಲ. ಆದ್ದರಿಂದ ಈ ಎಲ್ಲಾ ಸಮಸ್ಯೆಗೆ ಪರಿಹಾರ ಮಾಡಿ ಕೊಡಬೇಕು ಎಂದು ಆಂಬ್ಯುಲೆನ್ಸ್ ಚಾಲಕರ ಮಾಲಕರ ಸಂಘ ಸುಳ್ಯ ತಾಲೂಕು ಸದಸ್ಯರು ಮೇ. 23 ರಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ತುರ್ತು ಸಂದರ್ಭಗಳಲ್ಲಿ ಬ್ರಹ್ಮರಕೋಟ್ಲು ಟೋಲ್ ನಲ್ಲಿ ಎಮರ್ಜೆನ್ಸಿ ವೇ ತೆರೆಯಲು ಟೋಲ್ ಸಿಬ್ಬಂದಿಗಳು ತಡ ಮಾಡುತ್ತಿದ್ದು ಹಾಗೂ ಎಮರ್ಜೆನ್ಸಿ ವೇನಲ್ಲಿ ಇರುವ ಹಂಪ್ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಯವರಿಗೆ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಜೂನ್ 1 ರ ಒಳಗಾಗಿ ಎಲ್ಲ ಸಮಸ್ಯೆ ಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.