ಹಾಫಿಲ್ ಆದ ಮಹಮದ್ ಝಿದಾನ್ ರವರಿಗೆ ತೆಕ್ಕಿಲ್ ಪ್ರತಿಷ್ಠಾನದಿಂದ ಸನ್ಮಾನ…

ಕ್ಯಾಲಿಕಟ್ ನಲ್ಲಿ ನಡೆದ ಕುಟುಂಬದ ಕಾರ್ಯಕ್ರಮದಲ್ಲಿ ಶ್ರೀಮತಿ ಝೀನತ್ ಫೆರೂಕ್ ಹಾಗೂ ಡಾಕ್ಟರ್ ಹಾಶಿಮ್ ಅವರ ಪುತ್ರ ತನ್ನ 14 ರ ವರ್ಷದಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ (2018 ರಲ್ಲಿ ಹಾಫಿಲ್) ಸಂಪೂರ್ಣ ಖುರಾನ್ ಕಂಠಪಾಠ ಮಾಡಿ ಹಾಫಿಲ್ ಆಗಿ ಪ್ರಸ್ತುತ ಇಂಡಿಯನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ರಿಯಾದ್ ಸೌದಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಹಮದ್ ಝಿದಾನ್ ರವರನ್ನ ತಾಯ್ನಾಡಿಗೆ ಬಂದಾಗ ತೆಕ್ಕಿಲ್ ಪ್ರತಿಷ್ಠಾನ ಹಾಗೂ ಕುಟುಂಬದ ಪರವಾಗಿ ಟಿ ಎಂ ಬಾಬಾ ಹಾಜಿ ತೆಕ್ಕಿಲ್ ಸನ್ಮಾನಿಸಿದರು.
ಟಿ ಎಂ ಶಾಜ್ ತೆಕ್ಕಿಲ್ ಸ್ಮರಣಿಕೆ ನೀಡಿದರು. ಟಿ ಎಂ ಶಾಹೀದ್ ತೆಕ್ಕಿಲ್ ರ ಸಹೋದರಿಯಾದ ಝಿನತ್ ರವರ ಪುತ್ರನಾದ ಝಿದಾನ್ ರವರು ಕುಟುಂಬದಲ್ಲಿ ಪ್ರಥಮ ಹಾಫಿಲ್ ಆದವರು ಮಹಮದ್ ಝಿದಾನ್. ಇವರ ಸಹೋದರಿ ಹಲೀಮ ಯುಮ್ನ ಅವರು ಪ್ರಪಂಚದ ಅತಿ ದೊಡ್ಡ ವಿಶ್ವವಿದ್ಯಾನಿಲಯವಾದ ರಿಯಾದಿನ ಪ್ರಿನ್ಸ್ ನೂರಾ ಯುನಿವರ್ಸಿಟಿಯಲ್ಲಿ ಅರೇಬಿಕ್ ಲಿಟರೇಚರ್ ವ್ಯಾಸಂಗ ಮಾಡುತ್ತಿದ್ದು, ಸಹೋದರ ಫುಹಾದ್ ಝಿನಾನ್ ಚೀನಾದಿಂದ ಎಂ ಬಿ ಬಿ ಎಸ್ ಪದವಿಯನ್ನು ಪೂರೈಸಿದ್ದಾರೆ.
ಇವರ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಕಾಳಜಿ ವಹಿಸಿದ ತಾಯಿ ಎನ್ ಪಿ ಝೀನತ್ ಫೆರೋಕ್ ಅವರು ಸುಳ್ಯ ಕೆ ವಿ ಜಿ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿನಿ .ತಂದೆ ಡಾಕ್ಟರ್ ಹಾಶಿಮ್ ರಿಯಾದ್ ನ್ಯು ಸಫಾ ಮಕ್ಕಾ 2 ರಲ್ಲಿ ಎಲುಬು ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.