ಮೂಡಬಿದ್ರೆ ಹಾಗೂ ಮುಲ್ಕಿ -ಕಾಂಗ್ರೆಸ್ ಕಾರ್ಯಕರ್ತರ ಸಂವಾದ ಸಭೆ…

ಮೂಡಬಿದ್ರೆ: ಜು .14 ರಂದು ನಡೆದ ಮೂಡಬಿದ್ರೆ ಹಾಗೂ ಮುಲ್ಕಿ ಬ್ಲಾಕ್ ನ ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಕಾಂಗ್ರೆಸ್ ಕಾರ್ಯಕರ್ತರ ಸಂವಾದ ಸಭೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಮಂಜುನಾಥ ಭಂಡಾರಿಯವರು ಭಾಗವಹಿಸಿದರು.
ಮಾಜಿ ಸಚಿವರಾದ ಶ್ರೀ ಅಭಯ ಚಂದ್ರ ಜೈನ್ , ದ.ಕ ಜಿಲ್ಲಾ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಕೆ.ಪಿ.ಸಿ.ಸಿ ಕಾರ್ಯದರ್ಶಿಮಿಥುನ್ ರೈ , ಮುಲ್ಕಿ ಬ್ಲಾಕ್‌ನ ಅಧ್ಯಕ್ಷರಾದ ಶ್ರೀ ಮೋಹನ್ ಪಿ. ಕೋಟ್ಯಾನ್ , ಮೂಡಬಿದ್ರಿ ಬ್ಲಾಕ್‌ನ ಅಧ್ಯಕ್ಷರಾದ ಶ್ರೀ ವೆಲೆರಿಯನ್ ಸಿಕ್ವೇರ ಹಾಗೂ ಮೂಡಬಿದ್ರೆ ಕ್ಷೇತ್ರದ ಪ್ರಮುಖ ನಾಯಕರುಗಳು ಉಪಸ್ಥಿತರಿದ್ದರು.