ಕೇರಳ,ಕರ್ನಾಟಕ ಮಕ್ಕಳ ಉತ್ಸವದ ಅಂಗವಾಗಿ ಕಲಾ ಪ್ರದರ್ಶನ…

ಕಾಸರಗೋಡು:ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್(ರಿ) ಕನ್ನಡ ಗ್ರಾಮ ಕಾಸರಗೋಡು ಕೇರಳ ರಾಜ್ಯ ಇವರ ವತಿಯಿಂದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ 2024 ಹಾಗು ಕೇರಳ ಕರ್ನಾಟಕ ಮಕ್ಕಳ ಉತ್ಸವದ ಅಂಗವಾಗಿ ಕಲಾ ಪ್ರದರ್ಶನ ಕಾಸರಗೋಡಿನಲ್ಲಿನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಉದ್ಘಾಟಿಸಿ ಮಾತನಾಡಿ, ಕಾಸರಗೋಡಿನ ಜನರ ಕನ್ನಡ ಅಭಿಮಾನ ಅಲ್ಲದೆ ಶಿವರಾಮ ಅವರ ನೇತೃತ್ವದಲ್ಲಿ ಹಲವಾರು ಕನ್ನಡ ಮತ್ತು ಸಾಹಿತ್ಯ ಪರ ಕಾರ್ಯಕ್ರಮಗಳು ನಡೆಯುತ್ತಿದ್ದು ಇದು ಕನ್ನಡ ಭಾಷೆಯನ್ನು ಗಡಿನಾಡಲ್ಲಿ ಉಳಿಸಿ ಬೆಳೆಸಲು ಸಹಾಯಕವಾಗಿದೆ ಎಂದು ತಿಳಿಸಿದರು.
ಕಾಸರಗೋಡು ಎಂದೆಂದಿಗೂ ಕನ್ನಡ ರಾಜ್ಯದ ಅವಿಭಾಜ್ಯ ಅಂಗ. ಇಲ್ಲಿಯ ಕನ್ನಡಿಗರ ಬೆಳವಣಿಗೆಗೆ ಕರ್ನಾಟಕ ಸರಕಾರ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಅಭಿಪ್ರಾಯಪಟ್ಟ ಅವರು ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನ, ಭಾಷೆಯ ಬಗ್ಗೆ ಗೌರವ ಇರಬೇಕು. ಎರಡು ರಾಜ್ಯಗಳ ವಿದ್ಯಾರ್ಥಿಗಳ ಈ ಸಮ್ಮೇಳನ ಅದಕ್ಕೆ ಪೂರಕವಾಗಿದ್ದು ಕಲಾ ಪ್ರದರ್ಶನದ ಸಾಮಗ್ರಿಗಳನ್ನು ಶ್ರೀ ವೆಂಕಟರಮಣ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಅಧ್ಯಯನ ಕೇಂದ್ರದ ಸದಸ್ಯರು ಕೈ ಕುಸುರಿಯಿಂದ ನಿರ್ಮಿಸಿದ್ದು, ಅದು ಅದ್ಭುತವಾಗಿ ಮೂಡಿ ಬಂದಿದೆ ಎಂದು ಸದಸ್ಯರನ್ನು ಅಭಿನಂದಿಸಿದರು. ಸರಕಾರದ ಸಹಕಾರ ಇಲ್ಲದೆ ನಡೆಸಿದ ಕಾರ್ಯಕ್ರಮ ಎಲ್ಲರಿಗೂ ಮಾದರಿ ಎಂದು ಸಂಘಟಕರ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಸಮಾರಂಭದಲ್ಲಿ ಸಿ ಎನ್ ಅಶೋಕ್,ಶ್ರೀಮತಿ ಶಾರದಾ, ನಿವೃತ ಐ ಎ ಎಸ್ ಅಧಿಕಾರಿ ಕೆ ಶಶಿಧರ್, ಸಮ್ಮೇಳನದ ಸರ್ವಾಧ್ಯಕ್ಷರು ಕು ಹರ್ಷಿತ, ಸಹ ಅಧ್ಯಕ್ಷರು ಕು ಶಿವಾನಿ ಕೂಡ್ಲು, ಈಶ್ವರ್ ಪ್ರಸಾದ್, ರಾಧಾಕೃಷ್ಣ ಉಳಿಯತಡ್ಕ, ಶಾಲಿನಿ ಸತೀಶ್ ಶೆಟ್ಟಿ ಠಾಣೆ ಮಹಾರಾಷ್ಟ್ರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

whatsapp image 2024 11 10 at 8.21.58 pm

whatsapp image 2024 11 10 at 8.22.00 pm

whatsapp image 2024 11 10 at 8.22.04 pm

Sponsors

Related Articles

Back to top button