ಪಣೋಲಿಬೈಲು ಕಲ್ಲುರ್ಟಿಗೆ ಕೋಲ ಸೇವೆ…

ಬಂಟ್ವಾಳ: 2018ರ ವಿಧಾನಸಭಾ ಚುಣಾವಣೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅವರ ವಿಜಯಕ್ಕೋಸ್ಕರ ಬಿಜೆಪಿ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಯವರು ಪಣೋಲಿಬೈಲು ತಾಯಿ ಕಲ್ಲುರ್ಟಿಗೆ ಕೋಲ ಸೇವೆಯ ಹರಕೆ ಹೇಳಿಕೊಂಡಿದ್ದು, ತಾಯಿ ಅವರ ಇಷ್ಟಾರ್ಥವನ್ನು ನೆರೆವೇರಿಸಿದ್ದು, ಇಂದು ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ಹರಕೆಯ ಕೋಲವು ಸಂಪನ್ನಗೊಂಡಿತು.ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.