ನಾಣ್ಯ- ಕುಲಾಲ ಸುಧಾರಕ ಸಂಘ (ರಿ.)ಸಂಭ್ರಮದ ವಾರ್ಷಿಕೋತ್ಸವ ಸಮಾರಂಭ…
ಸಮುದಾಯದ ಅಭಿವೃದ್ದಿಯಿಂದ ಸಮಾಜದ ಏಳಿಗೆ ಸಾಧ್ಯ: ಸದಾಶಿವ ಕುಲಾಲ್ ಅತ್ತಾವರ...

ಬಂಟ್ವಾಳ :ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ ನಾಣ್ಯ,ಪುದು, ಇದರ 32ನೇ ವಾರ್ಷಿಕೋತ್ಸವ ಸಮಾರಂಭವು ಅದ್ದೂರಿಯಾಗಿ ಮೇ .18ರಂದು ಆದಿತ್ಯವಾರ ಕುಲಾಲ ಸಮುದಾಯ ಭವನ ನಾಣ್ಯ ದಲ್ಲಿ ನಡೆಯಿತು.
ಸಂಜೆ ನಡೆದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಲಾ ರಮೇಶ್, ಅಧ್ಯಕ್ಷರು, ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ ಇವರು ವಹಿಸಿದರು,
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸದಾಶಿವ ಕುಲಾಲ್ ಅತ್ತಾವರ, ಅಧ್ಯಕ್ಷರು, ಶ್ರೀ ದೇವಿ ದೇವಸ್ಥಾನ, ಮಂಗಳೂರು ಇವರು ಮಾತನಾಡಿ, ಕುಲಾಲ ಸಮುದಾಯ ಸಂಘಟಿತರಾಗಿ ಸಮಾಜದಲ್ಲಿ ಗುರುತಿಸಿಕೊಂಡಲ್ಲಿ ಸಾಮಾಜಿಕ, ರಾಜಕೀಯವಾಗಿ ಬಲಯುತವಾಗಲು ಸಾಧ್ಯ, ಸಮುದಾಯದ ಅಭಿವೃದ್ದಿಯಿಂದ ಸಮಾಜದ ಏಳಿಗೆ ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಡಾ| ಬಾಲಕೃಷ್ಣ ಕುಮಾರ್, ಉಪನ್ಯಾಸಕರು, ಯೆನಪೋಯಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು & ಆಸ್ಪತ್ರೆ ದೇರಳಕಟ್ಟೆ, ಕೃಷ್ಣಪ್ಪ ಬಿ., ಅಧ್ಯಕ್ಷರು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ನಯನಾಕ್ಷಿ ಅಡ್ಯಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಡಾಕ್ಟರೇಟ್ ಪದವಿ ಪಡೆದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಸೌಮ್ಯ ಎಂ.ಫಾರ್ಮ ಇವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು. ಬಳಿಕ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು ಹಾಗೂ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಿಸಲಾಯಿತು.
ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ಮಾಜಿ ಅಧ್ಯಕ್ಷರಾದ ದೇವದಾಸ ಕೆ ಆರ್ ಪ್ರಾಸ್ತವಿಕವಾಗಿ ಮಾತನಾಡಿ, ಉಪಾಧ್ಯಕ್ಷ ಸುರೇಶ ಕುಲಾಲ್ ನೆತ್ತರಕೆರೆ ಸ್ವಾಗತಿಸದರು, ಪ್ರ ಕಾರ್ಯದರ್ಶಿ ವಿಶ್ವನಾಥ ಕುಲಾಲ್ ನೆತ್ತರಕೆರೆ ವರದಿ ವಾಚಿಸಿ, ಜೊತೆ ಕಾರ್ಯದರ್ಶಿ ಲಿಖಿತ್ ಮಲ್ಲಿ ವಿದ್ಯಾರ್ಥಿ ಪ್ರೋತ್ಸಾಹ ಧನ ಪಟ್ಟಿ ಓದಿದರು, ಸೇವಾದಳದ ಕಾರ್ಯದರ್ಶಿ ಕಾವ್ಯ ಬಹುಮಾನಿತರ ಪಟ್ಟಿ ವಾಚಿಸಿ,ಕೋಶಾಧಿಕಾರಿ ವಿನಯ್ ಕಡೆಗೋಳಿ ಸನ್ಮಾನಪತ್ರ ಓದಿದರು, ಸಂಘಟನಾ ಕಾರ್ಯದರ್ಶಿ ನವೀನ್ ಕೊಡ್ಮಾಣ್ ಚಾಪೆ ಧನ್ಯವಾದವಿತ್ತು ಶಿಕ್ಷಕಿ ಗೌತಮಿ ಸುಜೀರು ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಗಣಹೋಮ, 32ನೇ ವಾರ್ಷಿಕ ಮಹಾಸಭೆ,ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಕುಲಾಲ ಸೇವಾದಳದ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.