ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ – ರಾಷ್ಟ್ರೀಯ ವಿಚಾರ ಸಂಕಿರಣ…
ಬಂಟ್ವಾಳ: ಬದಲಾವಣೆಯಗುತ್ತಿರುವ ಕಾಲಘಟ್ಟದಲ್ಲಿ ಸ್ವತ್ವದ ಶಕ್ತಿಯಿಂದ ಆರ್ಥಿಕತೆಯ ಮೇಲೆ ಸ್ವಾವಲಂಭನೆ ಸಾಧಿಸುವ ಹೊಸ್ತಿಲಲ್ಲಿ ಭಾರತ ಇದೆ. ಅಮೃತ ಕಾಲಸನ್ನಿಹಿತವಾಗಲಿದೆ. ಸ್ವಾಭಿಮಾನ , ಸ್ವಾವಲಂಬನೆ , ನಮ್ಮತನ ಜಗತ್ತಿಗೆ ಮಾದರಿಯಾಗಲಿದೆ. ದೇಶದ ಸಾಂಸ್ಕೃತಿಕ ಪರಂಪರೆಯನ್ನು ನಾಶಮಾಡಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಸುವರ್ಣ ನ್ಯೂಸ್ ಸುದ್ದಿವಿಭಾಗದ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಆಜಾದ್ ಸಭಾಭವನದಲ್ಲಿ ಏರ್ಪಡಿಸಲಾದ ‘ಸ್ವತ್ವದ ಆಧಾರದ ಮೇಲೆ ಭಾರತದ ಪುನರುತ್ಥಾನ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಸ್ವತ್ವಯುತ ಭಾರತ ಒಂದು ವಿವೇಚನೆ ಎಂಬ ವಿಷಯದಲ್ಲಿ ಮಾತನಾಡಿದರು.
ಎರಡನೇ ಗೋಷ್ಠಿಯಲ್ಲಿ ಶಿವಮೊಗ್ಗದ ವಿಶ್ರಾಂತ ಪ್ರಾರ್ಚಾರ್ಯ ಪ್ರೊ. ಬಿ.ಎಮ್. ಕುಮಾರಸ್ವಾಮಿ ‘ಭಾರತೀಯ ಅಭಿವೃದ್ಧಿ ಮಾದರಿಗಳು’ ಎಂಬ ವಿಚಾರದಲ್ಲಿ ವಿಷಯ ಮಂಡಿಸಿದರು. ಕಾರ್ಲ ಮಾಕ್ರ್ಸ್ , ಮ್ಯಾಕ್ಸ್ ವೆಬ್ಬರ್ ಮೊದಲಾದ ಪಾಶ್ಚಿಮಾತ್ಯ ಆರ್ಥಿಕ ತಜ್ಞರ ವಿಚಾರಗಳು ಜಾಗತಿಕವಾಗಿ ವಿಫಲಗೊಂಡಿವೆ. ಭಾರತದ ಹಿಂದುತ್ವ ಮತ್ತು ಅಭಿವೃದ್ಧಿ ಆರ್ಥಿಕತೆಯು ಸುಸ್ಥಿರ ಅಭಿವೃದ್ಧಿಗೆ ಮಾದರಿಯಾಗಿದೆ. ಆದ್ಯಾತ್ಮಿಕ ಮತ್ತು ಲೌಕಿಕ ಅಯಾಮವು ಭಾತರದ ಆರ್ಥಿಕತೆಗೆ ಮೂಲವಾಗಿದೆ ಎಂದು ವಿವರಿಸಿದರು.
ಮೂರನೇ ಗೊಷ್ಠಿಯಲ್ಲಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ‘ಆಡಳಿತ ಮತ್ತು ನಿರ್ವಹಣೆ ಭಾರತೀಯ ಮಾದರಿ’ ಎಂಬ ವಿಚಾರದಲ್ಲಿ ಮಾತನಾಡಿದರು. ಆಡಳಿತದಲ್ಲಿ ಬ್ರಿಟಿಷ್ ಮಾನಸಿಕತೆಯನು ಹೋಗಲಾಡಿಸಿ ಸ್ವಂತಿಕೆಯ ಆಧಾರದಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವಾಗಿ ಕಟ್ಟಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯ ಮಂಡಿಸಿರು.
ಸಮಾರೋಪ ಸಮಾರಂಭದಲ್ಲಿ ಚಿಂತಕ ಲೇಖಕ ಚಕ್ರವರ್ತಿ ಸೂಲಿಬೆಲೆಯವರು ‘ಸ್ವಾಮಿ ವಿವೇಕಾನಂದರ ಚಿಂತನೆಯ ಪ್ರಸ್ತುತತೆ’ ಎಂಬ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.ಭಾರತದ ಕೇಂದ್ರ ಧರ್ಮ, ತ್ಯಾಗ, ಪರೋಪಕಾರ, ಸೇವೆ ಭಾರತೀಯರಲ್ಲಿ ಅಂತರ್ಗತವಾಗಿದೆ. ವಿವೇಕಾನಂದರು ವಿಶ್ವಮಾನವತೆಯ ಪರಿಕಲ್ಪನೆಯೊಂದಿಗೆ ಭಾರತೀಯತೆಯ ಅವಶ್ಯಕತೆಯನ್ನು ಸಾರಿದರು. ವೈಯಕ್ತಿಕವಾದ ಭಾವನೆಗಳು ನಮ್ಮ ಪರಂಪರೆಯ ಸತ್ವಗಳು ರಾಷ್ಟ್ರೀಯತೆಯ ಅಡಿಗಲ್ಲಾಗಿದೆ. ಇಂದು ಪಾಶ್ಚಾತ್ಯ ದುಷ್ಟಶಕ್ತಿಗಳಿಗೆ ಪ್ರತ್ಯುತ್ತರ ನೀಡುವ ಶಕ್ತಿಯನ್ನು ಭಾರತ ಪಡೆದುಕೊಂಡಿದೆ ಎಂದು ಉದಾಹರಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರಸ್ತಾವನೆ ಗೈದರು. ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿದರು. ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ , ಸಂಚಾಲಕ ವಸಂತ ಮಾಧವ , ಸಹಸಂಚಾಲಕ ರಮೇಶ್ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಚಾರಸಂಕಿರಣದಲ್ಲಿ 50 ಸಂಸ್ಥೆಗಳ 897 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.