ಅರಂತೋಡು – 75 ನೇ ಸ್ವಾತಂತ್ರ್ಯ ದಿನಾಚರಣೆ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ವಿತರಣಾ ಕಾರ್ಯಕ್ರಮ…

ಸುಳ್ಯ: ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಮತ್ತು ಸಸಿ ವಿತರಣಾ ಕಾರ್ಯಕ್ರಮ ಅರಂತೋಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಧ್ವಜಾರೋಹಣವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ನೇರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಹರಿಣಿ ವಹಿಸಿದರು. ಮುಖ್ಯ ಅತಿಥಿಯಾಗಿ ಅರಂತೋಡು ಪಾಪ್ಯುಲರ್ ಎಜುಕೇಶನ್ ಸೊಸೈಟಿ ಸಂಚಾಲಕರಾದ ಕೆ.ಆರ್ ಗಂಗಾಧರ್ ಮಾತನಾಡಿ, ಜಾತಿ ಧರ್ಮದ ಕಚ್ಚಾಟ, ಹಗಲು ಹೊತ್ತಿನ ದರೋಡೆ ಕೊಲೆಗೆ ಕಡಿವಾಣ ಹಾಕಬೇಕು. ನಮ್ಮ ಕನಸನ್ನು ಈಡೇರಿಸಲು ಪಣತೊಡಬೇಕು ಎಂದು ಹೇಳಿದರು. ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ, ಹಿರಿಯರು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಫಲವಾಗಿ ಇವತ್ತು ನಾವು ಎಪ್ಪತ್ತೈದನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲು ಸಾಧ್ಯವಾಯಿತು. ದೇಶದ ರಕ್ಷಣೆಗೆ ಗಡಿಗಳ ಲ್ಲಿ ಸೈನಿಕರ ನಡೆಸುವ ಹೋರಾಟವನ್ನು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್ ಮಾತನಾಡಿ, ನಾವೆಲ್ಲಾ ಭಾರತೀಯರು ಜಾತಿ ಧರ್ಮ ಮತ ಎಂದು ಹೇಳಿ ಕಚ್ಚಾಟ ಮಾಡದೇ ಸೌರ್ಹದತೆ ಯಿಂದ ಬಾಳಬೇಕು ಎಂದು ಹೇಳಿದರು. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಉಳುವಾರು ಮಾತನಾಡಿ, ನಾವು ದೇಶಕ್ಕೆ ಎನಾದರೂ ಕೊಡುಗೆ ನೀಡಬೇಕು. ಅದರಂತೆ ಪಂಚಾಯತ್ ವತಿಯಿಂದ ನಡೆಯುವ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಅರಂತೋಡು ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಸಂಘದ ಅಧ್ಯಕ್ಷ ಶಿವಾನಂದ ಕುಕ್ಕುಂಬಳ, ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕು.ಶ್ವೇತಾ,ಕೆ.ಆರ್.ಪದ್ಮನಾಭ ,ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪ ಮೇದಪ್ಪ, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ರಮೇಶ್,ನೆಹರು ಸ್ಮಾರಕ ಕಾಲೇಜು ಮುಖ್ಯೋಪಾಧ್ಯಾಯ ಸೀತಾರಾಮ , ,ಗೋಪಾಲಕೃಷ್ಣ ಬನ ಮಾಜಿ ಸೈನಿಕರಾದ ಜನಾರ್ಧನ ,ಫಸೀಲು ,ಅಶಾ ಕಾರ್ಯಕರ್ತರು,ಅಂಗನವಾಡಿ ಮೇಲ್ವಿಚಾರಕರು, ಪಂಚಾಯತ್ ಸದಸ್ಯರು ,ಸಹಕಾರಿ ಸಂಘದ ನಿರ್ದೇಶಕರು , ಟಾಸ್ಕ ಪೊರ್ಸ್ ಸಮಿತಿ ಸದಸ್ಯರು ಶಾಲಾ ವಿಧ್ಯಾರ್ಥಿಗಳು ಹಾಗೂ ಊರಿನ ಗಣ್ಯ ವ್ಯಕ್ತಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸಸಿ ವಿತರಣಾ ಕಾರ್ಯಕ್ರಮವನ್ನು ಅಯೋಜಿಸಲಾಯಿತು. ನಂತರ ಅರಂತೋಡು ಪೇಟೆಯಲ್ಲಿ ಸ್ವಚ್ಛಗೊಳಿಸುವ ಕಾರ್ಯ ಮಾಡಲಾಯಿತು. ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಮ್.ಆರ್.ಜಯಪ್ರಕಾಶ್ ಸ್ವಾಗತಿಸಿದರು.

F6afcd06 954f 45fa A707 53d20dc67d93 300x141

Related Articles