ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪದೆ ಇದರ ವಠಾರದಲ್ಲಿ 10ನೇ ವರ್ಷದ ಮೊಸರು ಕುಡಿಕೆ…

ಬಂಟ್ವಾಳ: ನೇತ್ರಾವತಿ ಬಳಗ ಮಂಜಲ್ಪಾದೆ ಸಜೀಪ ಮುನ್ನೂರು ಇದರ ಆಶಯದಲ್ಲಿ ಜನ್ಮಾಷ್ಟಮಿ ಅಂಗವಾಗಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪದೆ ಇದರ ವಠಾರದಲ್ಲಿ 10ನೇ ವರ್ಷದ ಮೊಸರು ಕುಡಿಕೆಯ ಅಂಗವಾಗಿ ಸಾರ್ವಜನಿಕರಿಗೆ ಜರಗಿದ ಮುಕ್ತ ವಿವಿಧ ಆಟೋಟ ಸ್ಪರ್ಧೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ನೇತ್ರಾವತಿ ಬಳಗದ ಅಧ್ಯಕ್ಷ ರಾಕೇಶ್, ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಕೇಶವ ಭಟ್. ಬಿ, ಪ್ರಮುಖರಾದ ಗಣೇಶ್ ಕುಲಾಲ, ವಾಸು ಗಟ್ಟಿ, ಜಯ ಕುಲಾಲ್, ಪ್ರಶಾಂತ್ ಗಟ್ಟಿ, ಸತೀಶ್ ಗಟ್ಟಿ, ಸುಂದರ ಪೂಜಾರಿ, ಸರಸ್ವತಿ, ನರೇಂದ್ರ ಆಳ್ವ, ಪುರಂದರ, ಸುಖೇಶ, ಪ್ರಭಾಕರ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.