ಸಹ್ಯಾದ್ರಿ ಕಾಲೇಜಿನಲ್ಲಿ ಟೆಕ್ನೋ ವೀಕ್ ಕಾರ್ಯಕ್ರಮ……
ಮಂಗಳೂರು:ಸಹ್ಯಾದ್ರಿ ಕಾಲೇಜು ಮತ್ತು ಸುತ್ತಮುತ್ತಲಿನ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ‘ಟೆಕ್ನೋವೀಕ್ -2019’ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಲ್ಲಿ ನಡೆಯಿತು.
ಸರ್ ಎಂ ವಿಶ್ವೇಶ್ವರಯ್ಯ ಇವರ 158 ನೇ ಜನ್ಮ ದಿನಾಚರಣೆ ಅಂಗವಾಗಿ, ರಾಮ್ಕೊ ಸಿಮೆಂಟ್ಸ್ ಲಿಮಿಟೆಡ್
ಹಾಗೂ ಮಂಗಳೂರು ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಸಂಘದ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೇರಿಯನ್ ಪ್ರಾಜೆಕ್ಟ್ಸ್ ನಿರ್ದೇಶಕ ಎರ್ ಉಜ್ವಲ್ ಡಿಸೋಜ ಅವರು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸಿವಿಲ್ ಉದ್ದಿಮೆಯ ಕುರಿತು ಕೆಲವು ಒಳನೋಟಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರಗಳಾದ ಸಂಪನ್ಮೂಲ ನಿರ್ವಹಣೆ, ಯೋಜನೆ, ವೇಳಾಪಟ್ಟಿ, ಸಮೀಕ್ಷೆ ಇತ್ಯಾದಿಗಳು ವಿಚಾರ ಸಂಕಿರಣದಲ್ಲಿ ಚರ್ಚಿಸಲ್ಪಟ್ಟವು. ಉಜ್ವಲ್ ಅವರು ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲಭ್ಯವಿರುವ ಹಲವಾರು ಉದ್ಯೋಗಾವಕಾಶಗಳ ಬಗ್ಗೆ ಮತ್ತು ಅವುಗಳನ್ನು ಪಡೆದುಕೊಳ್ಳಲು ಹೇಗೆ ಸಿದ್ಧರಾಗಿರಬೇಕು ಎಂಬುದರ ಕುರಿತು ಮಾತನಾಡಿದರು.
ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಡಾ. ರಾಘವೇಂದ್ರ ಹೊಳ್ಳ ಅವರು ವೃತ್ತಿಪರ ನೀತಿಶಾಸ್ತ್ರದ ಕುರಿತು ತಮ್ಮ ಆಲೋಚನೆಗಳನ್ನು ಮತ್ತು ಅನುಭವಗಳನ್ನು ಹಂಚಿಕೊಂಡರು ಹಾಗು ಸಿವಿಲ್ ಎಂಜಿನಿಯರಿಂಗ್ ವೃತ್ತಿಯಲ್ಲಿ ಅನುಸರಿಸಬೇಕಾದ ಕೋಡ್, ಪ್ರಾಥಮಿಕ ಮೌಲ್ಯಗಳು ಮತ್ತು ಸಾರ್ವತ್ರಿಕ ನೈತಿಕ ತತ್ವಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ನಳಿನಿ ಇ ರೆಬೆಲ್ಲೊ, ಕಾರ್ಯಕ್ರಮದ ಸಂಯೋಜಕರಾದ ಎಂ.ದೀಪ್ತೀಶ್ರೀ ಎಸ್ ಐತಾಳ್ ಮತ್ತು ಇತರ ಅಧ್ಯಾಪಕರು ಉಪಸ್ಥಿತರಿದ್ದರು.