ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ “ಗುರುತತ್ವವಾಹಿನಿ” ಉದ್ಘಾಟನಾ ಕಾರ್ಯಕ್ರಮ…

ಬಂಟ್ವಾಳ : ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನದ ಬಗ್ಗೆ ಯುವವಾಹಿನಿ ಸದಸ್ಯರ ಮನೆ ಮನೆ ಭಜನೆ ಕಾರ್ಯಕ್ರಮದ ಮೊದಲ ಹಂತವಾಗಿ “ಗುರುತತ್ವವಾಹಿನಿ ” ಯ ಉದ್ಘಾಟನಾ ಕಾರ್ಯಕ್ರಮ ಕುದ್ರೋಳಿ ಗುರುಪೀಠದ ಸಮ್ಮುಖದಲ್ಲಿ ಜು.1 ರಂದು ನಡೆಯಿತು.
ಉದ್ಘಾಟನೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ ಪೂಜಾರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರ ಪ್ರಜಿತ್ ಅಮೀನ್, ನಾರಾಯಣ ಪಲ್ಲಿಕಂಡ ಉಪಾಧ್ಯಕ್ಷರು, ಸಂಘಟನಾ ಕಾರ್ಯದರ್ಶಿ ಉದಯ್ ಮೆನಾಡ್, ಮಹೇಶ್ ಬೊಳ್ಳಾಯಿ ಆರೋಗ್ಯ ನಿರ್ದೇಶಕರು, ಕ್ರೀಡಾ ನಿರ್ದೇಶಕರಾದ ಮಧುಸೂದನ್ ಮಧ್ವ, ಸದಸ್ಯರಾದ ಹರೀಶ್ ಅಜೆಕಲಾ, ನಾಗೇಶ್ ಪೂಜಾರಿ ಏಲಬೆ, ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ, ಮಂಗಳೂರು ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ, ಮಂಗಳೂರು ಘಟಕದ ಸದಸ್ಯರಾದಂತಹ ಕೌಶಿಕ್ ಮಂಜನಾಡಿ, ದಿಶಾಂತ್ ಮತ್ತಿತರರು ಉಪಸ್ಥಿತರಿದ್ದರು.

whatsapp image 2024 07 02 at 9.50.54 am

Related Articles

Back to top button