ಶ್ರೀ ಕ್ಷೇತ್ರ ಪಾಣೇರ್ ಬಸದಿಯಲ್ಲಿಏಕಶಿಲಾ ಮಾನಸ್ಥಂಭ, ಚತುರ್ಮುಖ ಬಿಂಬ ಸ್ಥಾಪನೆ ಶಿಲಾನ್ಯಾಸ…
ಬಂಟ್ವಾಳ, ಫೆ.11 : ಶ್ರೀ ಕ್ಷೇತ್ರ ಪಾಣೇರ್ ಬಸದಿ ಯಲ್ಲಿ ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರು ಮತ್ತು ಪರಮ ಪೂಜ್ಯ 108 ಮುನಿಶ್ರೀ ಪರಮ ಸಾಗರ ಮಹಾರಾಜರ ಶುಭಾಶೀರ್ವಾದಗಳೊಂದಿಗೆ, ಸೀಮೆಯ ಗುರುಗಳಾದ ಪರಮ ಪೂಜ್ಯ ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು, ಶ್ರೀ ಜೈನ ಮಠ ಮೂಡುಬಿದಿರೆ ಇವರ ಮಾರ್ಗದರ್ಶನ ಮತ್ತು ದಿವ್ಯ ಉಪಸ್ಥಿತಿಯಲ್ಲಿ ಶ್ರಾವಕರ ಬಹುದಿನಗಳ ನಿರೀಕ್ಷೆಯ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ ಬಿಂಬ ಸ್ಥಾಪನೆ ಇದರ ಶಿಲಾನ್ಯಾಸ ಕಾರ್ಯಕ್ರಮವು ಫೆ.6ರಂದು ವಾಸ್ತುತಜ್ಞ ಪಾದೂರು ಸುದರ್ಶನ ಇಂದ್ರರು ಮತ್ತು ಹಚ್ಚಾಡಿ ಅಜಿತ್ ಕುಮಾರ್ ಇಂದ್ರರ ನೇತೃತ್ವದಲ್ಲಿ ವಿಧಿವಿಧಾನ ಪೂರ್ವಕವಾಗಿ ನಡೆಯಿತು.
ಸಮಾರಂಭದಲ್ಲಿ ಏಕಶಿಲಾ ಮಾನಸ್ತಂಭದ ದಾನಿಗಳಾದ ಶ್ರೀಮತಿ ಶಶಿಕಲಾ ಮತ್ತು ಶ್ರೀ ಸಂಪತ್ ಕುಮಾರ್ , ಮಕ್ಕಳು ಹಾಗೂ ಕುಟುಂಬಸ್ಥರು ಬೆಂಗಳೂರು, ಮಾನಸ್ತಂಭದ ಮೇಲೆ ವಿರಾಜಮಾನರಾಗಲಿರುವ ಚತುರ್ಮುಖ ಬಿಂಬದ ದಾನಿಗಳಾದ ಶ್ರೀಮತಿ ಭಾರತಿ ಮತ್ತು ಶ್ರೀ ಶತ್ರುಂಜಯ ಶೆಟ್ಟಿ ಹಾಗೂ ಮಕ್ಕಳು, ಅತ್ತಾವರ, ಮಂಗಳೂರು,
ಮಾನಸ್ತಂಭದ ಸುತ್ತಲಿನ ಹಾಸು ಕಲ್ಲಿನ ದಾನಿಗಳಾದ ಶ್ರೀಮತಿ ರಶ್ಮಿತಾ ಮತ್ತು ಶ್ರೀ ಯುವರಾಜ್ ಜೈನ್ ಹಾಗೂ ಮಕ್ಕಳು ಎಕ್ಸೆಲೆಂಟ್ ಶಿಕ್ಷಣ ಸಂಸ್ಥೆಗಳು, ಮೂಡುಬಿದಿರೆ
ಶ್ರೀಮತಿ ಧನಶ್ರೀ ಮತ್ತು ಶ್ರೀ ಉದಯ ಕುಮಾರ್ ಹಾಗೂ ಮಕ್ಕಳು, ಮಳಲಿ,
ಮಾನಸ್ತಂಭದ ಮುಂಭಾಗದ ಮೆಟ್ಟಿಲುಗಳ ದಾನಿಗಳಾದ ನಗ್ರಿ ಕುಟುಂಬಸ್ಥರ ಪರವಾಗಿ ಶ್ರೀ ಧನ್ಯ ಕುಮಾರ್, ಶ್ರೀ ಸಂಕಪ್ಪ ಶೆಟ್ಟಿ ಹಾಗೂ ಶ್ರೀ ಜೀವೇಂದ್ರ ಬಲ್ಲಾಳ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬಸದಿಯು ಬೆಳೆದು ಬಂದ ಇತಿಹಾಸ, ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ಭವ್ಯ ಚಾತುರ್ಮಾಸ, ಬಸದಿಯಲ್ಲಿ ಮಾನಸ್ತಂಭದ ಮಹತ್ವ, ಪಾಣೇರ್ ಶ್ರಾವಕ ಬಂಧುಗಳ ಬಹುದಿನಗಳ ಕನಸಾದ ಬಸದಿಯ ಮಾನಸ್ತಂಭಕ್ಕೆ ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ಆಶೀರ್ವಾದ ಮುಖೇನ ದಾನಿಗಳ ಸರ್ವ ಸಹಕಾರದಿಂದ ಶಿಲಾನ್ಯಾಸ ಸಂಪನ್ನಗೊಂಡ ಬಗ್ಗೆ ವಿವರವಾಗಿ ಶ್ರೀ ಧರಣೇಂದ್ರ ಇಂದ್ರರು ಪ್ರಾಸ್ತಾವಿಕವಾಗಿ ತಿಳಿಸಿದರು.
ಏಕಶಿಲಾ ಮಾನಸ್ತಂಭದ ಶಿಲಾನ್ಯಾಸದಲ್ಲಿ ದಾನ ನೀಡಿ ಸಹಕರಿಸಿದ ಎಲ್ಲಾ ದಾನಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಮೂಡುಬಿದಿರೆ ಶ್ರೀ ಜೈನ ಮಠದ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಮ್ಮ ಆಶೀರ್ವಚನ ನೀಡಿ, ಪಾಣೇರು ಬಸದಿಯ ಶ್ರಾವಕರು, ದಾನಿಗಳನ್ನು, ಬಸದಿಯ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು. ಬಸದಿಯ ಶ್ರಾವಕರಾಗಿ ಮುನಿ ದೀಕ್ಷೆ ಪಡೆದ ಪರಮಪೂಜ್ಯ 108 ಮುನಿಶ್ರೀ ಚಂದ್ರ ಸಾಗರ ಮಹಾರಾಜರು, ಪರಮ ಪೂಜ್ಯ 108 ಮುನಿಶ್ರೀ ಪರಮಸಾಗರ ಮಹಾರಾಜರ ಬಗ್ಗೆ ತಿಳಿಸಿದರು.
ಸಮಿತಿಯ ಅಧ್ಯಕ್ಷರಾದ ಶ್ರೀ ಸಂಪತ್ ಕುಮಾರ್ ಹೊಸಂಗಡಿ ಅರಮನೆಯವರು ಅತಿಥಿಗಳನ್ನು ಸ್ವಾಗತಿಸಿದರು.
ಶ್ರೀಮತಿ ಸನ್ಮತಿ ಜಯಕೀರ್ತಿ ಪ್ರಾರ್ಥನೆ ಮಾಡಿದರು. ಜಯಕೀರ್ತಿ ಜೈನ್ ಧನ್ಯವಾದ ಸಮರ್ಪಿಸಿದರು. ಹರ್ಷರಾಜ ಕಾರ್ಯಕ್ರಮ ನಿರೂಪಿಸಿದರು.





