ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಗೆ ಕನ್ನಡ ಪಯಸ್ವಿನಿ ಗಡಿನಾಡ ಪ್ರಶಸ್ತಿ -2024 …

ಬಂಟ್ವಾಳ: ಕನ್ನಡ ಭವನ ಮತ್ತು ಗ್ರಂಥಾಲಯ (ರಿ )ಕನ್ನಡ ಭವನ ಪ್ರಕಾಶನ ಕಾಸರಗೋಡು ಮತ್ತು ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕಥಾಬಿಂದು ಪ್ರಕಾಶನ ಮಂಗಳೂರು ಇದರ ವತಿಯಿಂದ ಕೊಡಲ್ಪಡುವ “ಕನ್ನಡ ಪಯಸ್ವಿನಿ ಗಡಿನಾಡ ಪ್ರಶಸ್ತಿ -2024 ” ಪ್ರಶಸ್ತಿ ಗೆ ಹಿರಿಯ ಪತ್ರಕರ್ತ,ಸಾಹಿತಿ,ವ್ಯಕ್ತಿತ್ವ ವಿಕಸನ ತರಬೇತುದಾರ ಜಯಾನಂದ ಪೆರಾಜೆ ಆಯ್ಕೆಯಾಗಿದ್ದಾರೆ.
ಕನ್ನಡ ಭವನ ಕಾಸರಗೋಡಿನಲ್ಲಿ ಮಾ. 10 ರಂದು ನಡೆದ ಕೇರಳ ಮತ್ತು ಕರ್ನಾಟಕ ಕನ್ನಡ ಸಂಸ್ಕೃತಿ ಗಡಿನಾಡ ಉತ್ಸವ -2024 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಕರ್ನಾಟಕ ಹಾಗೂ ಕೇರಳದ ಗಣ್ಯರಾದ ಪಿ.ವಿ.ಪ್ರದೀಪ ಕುಮಾರ್ , ಹಿರಿಯ ಕವಿಗಳಾದ ವಿ.ಜಿ.ಕುಳಮರ್ವ,ರಾಧಾಕೃಷ್ಣ ಉಳಿಯತಡ್ಕ ಮೊದಲಾದವರ ಉಪಸ್ಥಿತಿಯಲ್ಲಿ ಕವಿಗೋಷ್ಠಿ ಹಾಗೂ ವಿವಿಧ ಕಾರ್ಯ ಕ್ರಮಗಳು ಆಯೋಜನೆಗೊಂಡಿದ್ದವು.

ಜಯಾನಂದ ಪೆರಾಜೆಯವರು ಜೆಸಿಐ ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆಯ ರಾಜ್ಯ ತರಬೇತುದಾರರು, ಸೀನಿಯರ್ ಚೇಂಬರ್ ಇಂಟರ್ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್ ಸ್ಥಾಪಕಾಧ್ಯಕ್ಷರು, ಮಧು ಪ್ರಪಂಚ ‌ತ್ರೈಮಾಸಿಕ ಪತ್ರಿಕೆ ಸಂಪಾದಕರು, ಹೊಸದಿಗಂತ ದಿನಪತ್ರಿಕೆ ವರದಿಗಾರರು, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು, ಸಂದರ್ಶಕ ಪ್ರಾಧ್ಯಾಪಕರು, ಜಿಲ್ಲಾ ಮತ್ತು ರಾಜ್ಯಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತರು,ಕನ್ನಡ ಪಠ್ಯಪುಸ್ತಕ ರಾಜ್ಯ ಸಂಪನ್ಮೂಲ ವ್ಯಕ್ತಿ. ಕತೆ,ಕವನ,ಚುಟುಕು ರಚನೆಗಳ ತರಬೇತುದಾರರು,ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಮಾಜಿ‌ ಅಧ್ಯಕ್ಷರು,ದ.ಕ.ಜಿಲ್ಲಾ ಬರಹಗಾರ ಸಂಘದ ಅಧ್ಯಕ್ಷರು,ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ‌ ದ.ಕ.ಜಿಲ್ಲಾಧ್ಯಕ್ಷರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿ ನಿಕಟಪೂರ್ವಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು‌ಬಂಟ್ವಾಳ ತಾಲೂಕು‌ ಅಧ್ಯಕ್ಷರು, ಮಕ್ಕಳ ಸಾಹಿತ್ಯ ಪರಿಷತ್ತು ಕತೆ,ಕವನ,ಚುಟುಕು ರಚನೆಗಳ ತರಬೇತುದಾರರಾಗಿದ್ದಾರೆ. “ಭಾವ ಬಿಂದು” ಅವರ ಪ್ರಕಟಿತ ಕವನ ಸಂಕಲನ.

Sponsors

Related Articles

Back to top button