ವಿಧಾನಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ- ಮತದಾನ ಮಾಡಿದ ಸುಳ್ಯ ಕಾಂಗ್ರೆಸ್ ನಾಯಕರು…
ಸುಳ್ಯ: ಸುಳ್ಯ ತಾಲೂಕು ಆಡಳಿತ ಸೌಧದಲ್ಲಿ ವಿಧಾನಸಭಾ ಕ್ಷೇತ್ರದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಯ ಮತದಾನ ಕೇಂದ್ರ ದಲ್ಲಿ ಕಾಂಗ್ರೆಸ್ ನಾಯಕರು ಮತ ಚಲಾಯಿಸಿದ್ದಾರೆ.
ಸದ್ದಿಲ್ಲದೆ ನಡೆಯುತ್ತಿದ್ದ ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ ಈ ಬಾರಿ ಹೆಚ್ಚಿನ ಮಹತ್ವ ಪಡೆದಿರುತ್ತದೆ.
ಕಾಂಗ್ರೆಸ್ ನಾಯಕರಾದ ಪಿ. ಸಿ. ಜಯರಾಮ್, ಎನ್. ಜಯಪ್ರಕಾಶ್ ರೈ, ಎಂ. ವೆಂಕಪ್ಪಗೌಡ, ಕೆ. ಎಂ. ಮುಸ್ತಫ, ಪಿ. ಎಸ್. ಗಂಗಾದರ್, ಶಾಫಿ ಕುತ್ತಮೊಟ್ಟೆ, ಉಸ್ತುವಾರಿ ಪ್ರದೀಪ್ ಕುಮಾರ್ ರೈ ಪಾoಬಾರ್, ರಿಯಾಜ್ ಕಟ್ಟೆಕ್ಕರ್, ನಂದರಾಜ್ ಸಂಕೇಶ್,ಪವಾಜ್ ಕನಕಮಜಲು, ಕರುಣಾಕರ ಅಡಪ0ಗಾಯ, ನವೀನ್ ರೈ, ಮಹೇಶ್ ಬೆಳ್ಳಾರ್ಕರ್,ಅಶೋಕ್ ಚೂ0ತಾರ್ , ಹಮೀದ್ ಕುತ್ತಮೊಟ್ಟೆ, ದಿನೇಶ್ ಅಂಬೇಕಲ್ಲು,ಧೀರ ಕ್ರಾಸ್ತ, ರಾಜು ಪಂಡಿತ್, ರಾಜೀವಿ, ಆರ್. ರೈ, ಶಶಿಧರ ಎಂ. ಜೆ, ಭವಾನಿ ಶಂಕರ್, ಗೋಕುಲದಾಸ್ ಮೊದಲಾದವರು ಭಾಗವಹಿಸಿದ್ದರು.