ಆರ್ ಆರ್ ಫ್ಯಾಶನ್ ಇಂಡಸ್ಟ್ರೀಸ್ ಉದ್ಘಾಟನಾ ಕಾರ್ಯಕ್ರಮ…

ಮೂಡುಬಿದಿರೆ: ಅಲಂಗಾರಿನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಆರ್ ಆರ್ ಫ್ಯಾಶನ್ ಇಂಡಸ್ಟ್ರೀಸ್ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮುಲ್ಕಿ- ಮೂಡುಬಿದಿರೆಯ ಶಾಸಕರಾದ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ರವಿಚಂದ್ರ ಎಸ್, ಪುರಸಭಾ ಸದಸ್ಯರಾದ ಪಿ ಕೆ ತೋಮಸ್, ಇಂಜಿನಿಯರ್ ವೀರೇಂದ್ರ ಕುಮಾರ್, ಪ್ರತಿಭಾ ರಾಮನಾಥ್, ರಶ್ಮಿತಾ ರಾಜೇಶ್, ದೀಪ್ತಿ ಜಯಪ್ರಸಾದ್, ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು.