ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಇಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ತಾಂತ್ರಿಕ ಉಪನ್ಯಾಸ…

ಮೂಡಬಿದ್ರಿ: ಇಲ್ಲಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವತಿಯಿಂದ “ಕರಿಯರ್ ಅಪಾರ್ಚುನಿಟಿಸ್ ಇನ್ VLSI ಆಂಡ್ ಎಂಬೆಡೆಡ್ ಸಿಸ್ಟಮ್ಸ್ ಇಂಡಸ್ಟ್ರಿ ” ಎಂಬ ವಿಷಯದ ಕುರಿತಾದ ತಾಂತ್ರಿಕ ಉಪನ್ಯಾಸ ಜೂ.1 ರಂದು ಆಯೋಜಿಸಲಾಗಿತ್ತು.
ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿ ಸಂಘ ಹಾಗೂ ISTE ಸ್ಟೂಡೆಂಟ್ ಚಾಪ್ಟರ್ (KA -109) ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ CoreEL ಟೆಕ್ನಾಲಜೀಸ್ ಕಂಪೆನಿಯ ಸ್ಕೂಲ್ ಆಫ್ ಎಂಬೆಡೆಡ್ ಸಿಸ್ಟಮ್ ಡಿಸೈನ್ ತರಬೇತಿ ವಿಭಾಗ ಸಾಂದೀಪಿನಿ ಇದರ ಮ್ಯಾನೇಜರ್ ಅರುಣ್ ಜಾನ್ ಮಥಾಯಿಸ್ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು.ಸಹಾಯಕ ಪ್ರಾಧ್ಯಾಪಕ ಪ್ರೊ.ಶಶಾಂಕ್ ಎಂ ಗೌಡ ಕಾರ್ಯಕ್ರಮ ಸಂಯೋಜಿಸಿದ್ದರು.
ವಿದ್ಯಾರ್ಥಿಗಳಾದ ಸ್ಮಿತಾಶ್ರೀ ಸ್ವಾಗತಿಸಿ, ರಕ್ಷಿತ್ ಅತಿಥಿಗಳ ಪರಿಚಯ ಮಾಡಿದರು. ನಿಕತ್, ಫಿಝ,ದಿವ್ಯಶ್ರೀ ಪ್ರಾರ್ಥಿಸಿದರು. ನೌಫಾಲ್ ಅಹ್ಮದ್ ವಂದಿಸಿದರು. ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.
ವಿಭಾಗದ ಮೂರನೇ ಮತ್ತು ನಾಲ್ಕನೇ ವರ್ಷದಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

IMG 20220601 WA0013 300x200

IMG 20220601 WA0023 300x200

IMG 20220601 WA0012 300x200

IMG 20220601 WA0021 1 300x200

Related Articles