ವಿದ್ಯಾನಿಕೇತನ ವಿದ್ಯಾಸಂಸ್ಥೆ: ವಿಶ್ವ ಯೋಗ ದಿನಾಚರಣೆ…

ಬಂಟ್ವಾಳ: ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಮ್ಟಾಡಿ ಬಂಟ್ವಾಳದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಸಂಸ್ಥೆ ಯ ಆಡಳಿತ ಟ್ರಸ್ಟಿ ಕಿರಣ್ ಎಸ್ .ಬಾಳಿಗಾ ಉದ್ಘಾಟಿಸಿ ಶುಭಹಾರೈಸಿದರು.
ಪಿಟಿಎ ಅಧ್ಯಕ್ಷ ಕೆ.ರಾಜೀವ ಯೋಗದ ಮಹತ್ವ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ,ಮಾಂಟೆಸ್ಸೋರಿ ಶಿಕ್ಷಣ ಮುಖ್ಯಶಿಕ್ಷಕಿ ಸವಿತಾ ಕಿರಣ್ , ಸುಜಾತ ಬಾಳೆಹೊಳೆ ಉಪಸ್ಥಿತರಿದ್ದರು.
ವಿದ್ಯಾಕೇಂದ್ರದ ಐನ್ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹೊರಾಂಗಣದಲ್ಲಿ ಸಮಾವೇಶಗೊಂಡು ಸಾಮೂಹಿಕ ಸೂರ್ಯನಮಾಸ್ಕಾರ ,ಯೋಗಾಸನ, ಪ್ರಾಣಾಯಾಮಗಳನ್ನು ಪ್ರದರ್ಶನ ಮಾಡಿದರು.ಶಾರೀರಿಕ ಶಿಕ್ಷಕಿ ವೀಣಾ ಕುಮಾರಿ ಯೋಗ ತರಬೇತಿ ನೀಡಿ ಸಂಯೋಜಿಸಿದರು.

Whatsapp Image 2026 06 20 At 12.32.05 Pm 300x169

Related Articles