ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಗೆ ಮೀಫ್ ಎಕ್ಸಲೆನ್ಸ್ ಅವಾರ್ಡ್…

ಎಸ್. ಎಸ್. ಎಲ್. ಸಿ ಶೇಕಡಾ 100 ಫಲಿತಾoಶದ ಸಾಧನೆ...

ಮಂಗಳೂರು:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ (ಮೀಫ್ ) ವತಿಯಿಂದ ವಿಶಿಷ್ಟ ಸಾಧನೆ ಗಳನ್ನು ಮಾಡಿದ ಶಿಕ್ಷಣ ಸಂಸ್ಥೆ ಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಅರೆ ವೈದ್ಯಕೀಯ, ತಾಂತ್ರಿಕ, ಪಿ ಯು ಸಿ ಉಚಿತ ಸೀಟ್ ಗಳ ವಿತರಣಾ ಸಮಾರಂಭ ಮಂಗಳೂರಿನ ಪ್ರೆಸ್ಟೀಜ್ ಸ್ಕೂಲ್ ಸಭಾoಗಣದಲ್ಲಿ ಜರಗಿತು.
2024 ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ ಯಲ್ಲಿ 100 ಶೇಕಡಾ ಫಲಿತಾoಶ, ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ಸರ್ವಾಂಗೀಣ ಸಾಧನೆಗೆ ಸುಳ್ಯ ಗ್ರೀನ್ ವ್ಯೂ ಶಾಲೆಗೆ ಮೀಫ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು. ಟಿ. ಖಾದರ್ ಫರೀದ್, ಕರ್ನಾಟಕ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಿರಿಯ ಐ. ಎ. ಎಸ್ ಅಧಿಕಾರಿ ಎಲ್. ಕೆ. ಆತಿಕ್, ಬ್ಯಾರಿ ‘ಸ್ ಸಮೂಹ ಸಂಸ್ಥೆ ಯ ಸಯ್ಯದ್ ಬ್ಯಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಸಂಚಾಲಕ ಎಸ್. ಎಂ. ಹಮೀದ್, ಮೀಫ್ ಉಪಾಧ್ಯಕ್ಷ, ಸ್ಕೂಲ್ ಆಡಳಿತ ಮಂಡಳಿ ಸದಸ್ಯ ಕೆ. ಎಂ. ಮುಸ್ತಫ, ಮುಖ್ಯ ಗುರುಗಳಾದ ಎಲ್ಯಾಸ್ ಕಾಶಿಪಟ್ಟಣ, ನಿಕಟಪೂರ್ವ ಮುಖ್ಯ ಗುರುಗಳಾದ ರಹೀಮ್ ಕಕ್ಕಿಂಜೆ ಪ್ರಶಸ್ತಿ ಸ್ವೀಕರಿಸಿದರು.

Sponsors

Related Articles

Back to top button