ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ವಾರ್ಷಿಕ ಮಹಾಸಭೆ – ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಪುನಾರಯ್ಕೆ…

ಸುಳ್ಯ: ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್( ರಿ) ಅರಂತೋಡು ಇದರ 44 ನೇ ವಾರ್ಷಿಕ ಮಹಾಸಭೆಯು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಎಸ್.ಎಮ್.ಅಬ್ದುಲ್ ಮಜೀದ್ ವಹಿಸಿದ್ದರು .ಅರಂತೋಡು ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿ ಉದ್ಘಾಟಿಸಿದರು .
ಮುಖ್ಯ ಅತಿಥಿಗಳಾಗಿ ಅರಂತೋಡು ಜುಮ್ಮಾಮಸೀದಿ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ,ಸಲಹಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಪಾರೆಕ್ಕಲ್, ಅಬ್ದುಲ್ ಖಾದರ್ ಪಟೇಲ್ ಮುಂತಾದವರು ಭಾಗವಹಿಸಿದರು.ನಂತರ ಸಂಸ್ಥೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷರಾಗಿ ಎಸ್.ಎಮ್.ಅಬ್ದುಲ್ ಮಜೀದ್ ಪುನಾರಯ್ಕೆಯಾದರು. ಗೌರವಾಧ್ಯಕ್ಷರಾಗಿ ಟಿ.ಎಮ್.ಶಹೀದ್ , ಪ್ರಧಾನ ಕಾರ್ಯದರ್ಶಿಯಾಗಿ ಫಸೀಲು ಎ, ಉಪಾಧ್ಯಕ್ಷ ರಾಗಿ ಶರೀಫ್ ಕುಕ್ಕುಂಬಳ, ಜೊತೆ ಕಾರ್ಯದರ್ಶಿ ಗಳಾಗಿ ಜಾವದ್ ಪಾರೆಕ್ಕಲ್,ವಹಾಬ್ ಅಡಿಮರಡ್ಕ,ಖಜಾಂಜಿಯಾಗಿ ಹಾಜಿ ಅಜರುದ್ದೀನ್,ಸದಸ್ಯರಾಗಿ ಹನೀಫ್ ಎ., ಮನ್ಸೂರ್ ಪಾರೆಕ್ಕಲ್,ನವಾಜ್ ಉದಯನಗರ,ಜುಬೈರ್.ಎ,ಫಯಾಜ್ ಪಟೇಲ್,ಆಶೀಕ್ ಕುಕ್ಕುಂಬಳ,ಮುಜೀಬ್ ಎ,ಬಾತಿಶಾ ಅರಂತೋಡು, ಸಮದ್ ಸಣ್ಣಮನೆ,ಮುಝಮ್ಮಿಲ್ ಕುಕ್ಕುಂಬಳ ಆಯ್ಕೆ ಮಾಡಲಾಯಿತು.

Related Articles

Back to top button