ನೈರುತ್ಯ ಪದವಿದರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ- ಕಾಂಗ್ರೆಸ್ ಅಭ್ಯರ್ಥಿ ಪರ ಟಿ.ಎಂ ಶಹೀದ್ ತೆಕ್ಕಿಲ್ ಮತಯಾಚನೆ…

ಉಡುಪಿ: ನೈರುತ್ಯ ಪದವಿದರ ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರ್ ಮಂಜುನಾಥ್ ಹಾಗೂ ಡಾ| ಕೆ.ಕೆ. ಮಂಜುನಾಥ್ ಕುಮಾರ್ ರ ಪರವಾಗಿ ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿನ ಬ್ಯಾರಿ ಶಿಕ್ಷಣ ಸಂಸ್ಥೆ ಕೋಡಿ ಕುಂದಾಪುರ, ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆ, ಮೊರಾರ್ಜಿ ವಸತಿ ಶಾಲೆ, ಬಿ.ಪಿ ಹೆಗಡೆ ಪದವಿ ಕಾಲೇಜ್ ಕುಂದಾಪುರ ಹಾಗೂ ವಿವಿದ ಕಾಲೇಜುಗಳಿಗೆ ತೆರಳಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ರವರು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದರು.
ಟಿ.ಎಂ ಶಾಹಿದ್ ತೆಕ್ಕಿಲ್ ರವರು ಎಲ್ಲ ಮತದಾರರನ್ನು ಸಂಪರ್ಕಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ ಮಾಡಿದರು. ಶಿಕ್ಷಕರ ಮತ್ತು ಪದವೀಧರ ಸಮಸ್ಯೆಗೆ ಪರಿಹಾರ, ನಿರುದ್ಯೋಗ ಭತ್ಯೆ ನೀಡುತ್ತಿದ್ದು ಇದೆಲ್ಲ ಕಾಂಗ್ರೆಸ್ ನ ಕೊಡುಗೆಯಾಗಿದೆ. ಆದುದರಿಂದ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ|ಕೆ.ಕೆ. ಮಂಜುನಾಥ್ ಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಸುಕುಮಾರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.