ಅನಿವಾಸಿ ಭಾರತೀಯ ಉದ್ಯಮಿಗಳಿಂದ ಸಚಿವರ ಭೇಟಿ…
ಬೆಳಗಾವಿ: ಬೆಳಗಾವಿ ವಿಧಾನ ಸೌಧದಲ್ಲಿ ಅನಿವಾಸಿ ಭಾರತೀಯ ವೇದಿಕೆಯ ಪ್ರಮುಖರಾದ ಡಾಕ್ಟರ್ ರೋನಾಲ್ಡ್ ಕೋಲಾಸೋ, ಝಕರಿಯ ಜೋಕಟ್ಟೆ ಸಹಿತ 28 ದೇಶದಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿಗಳು ಇಂದು ವಿಧಾನ ಪರಿಷತ್ ಸದಸ್ಯೆ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಆರತಿ ಕೃಷ್ಣ ಅವರ ನೇತೃತ್ವದಲ್ಲಿ ಬೆಳಗಾವಿ ವಿಧಾನ ಸೌಧದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್,ಕೆಪಿಸಿಸಿ ಕಾರ್ಯಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ,ವಿಧಾನಪರಿಷತ್ ಸದಸ್ಯ ಐವನ್ ಡಿ ಸೌಜ,ಕರ್ನಾಟಕ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಮೊದಲಾದವರನ್ನು ಭೇಟಿಯಾದರು.







